ಚಳ್ಳಕೆರೆ :
ಎಮ್ಮಿಗನೂರಿನಲ್ಲಿ ಗಣಿಗಾರಿಕೆ ಅನುಮತಿಕೊಡಬೇಡಿ
ಹೊಳಲ್ಕೆರೆ ತಾಲೂಕಿನ ಟಿ. ಎಮ್ಮಿಗನೂರು ರಿ. ಸರ್ವೇ ನಂಬರ್
142ರಲ್ಲಿ ಗಣಿಗಾರಿಕೆ ನೆಡಸಲು, ಅನುಮತಿ ನೀಡಬಾರದು
ಎಂದು ರೈತರು ಸಂಸದ ಗೋವಿಂದ ಕಾರಜೋಳರಿಗೆ ಮನವಿ
ನೀಡಿದರು.
ಇಂದು ಚಿತ್ರದುರ್ಗ ಡಿಸಿ ಕಚೇರಿಯಲ್ಲಿ, ಗಣಿ ಮತ್ತು
ಭೂ ವಿಜ್ಞಾನ ಇಲಾಖೆ ಸಭೆ ನಡೆಯುತ್ತಿದ್ದಾಗಲೆ, ಸಂಸದರಿಗೆ
ಮನವಿ ನೀಡಿ, ಗಣಿಗಾರಿಕೆಯಿಂದ ಕುಡಿವ ನೀರು, ಕೊಳವೆ
ಬಾವಿ ಅರಣ್ಯ ಪ್ರದೇಶಕ್ಕೆ ಸಮಸ್ಯೆಯಾಗುತ್ತಿದೆ ಎಂದರು.
ಇದಕ್ಕೆ
ಸಂಸದ ಕಾರಜೋಳ ಅಧಿಕಾರಿಗೆ ಅಲ್ಲಿ ಗಣಿಗಾರಿಕೆಗೆ ಅನುಮತಿ
ಕೊಡಬಾರದೆಂದು ಸೂಚಿಸಿದರು.