ಚಳ್ಳಕೆರೆ :
ಅಖಂಡ ಕರ್ನಾಟಕ ರೈತ ಸಂಘ ಚಳ್ಳಕೆರೆ ತಾಲ್ಲೂಕು
ಶಾಖೆವತಿಯಿಂದ
ಬರ ಪರಿಹಾರ ಮತ್ತು ಬೆಳೆ ನಿಮೆ ಒತ್ತಾಯಿಸಿ ಬೃಹತ್ ಚಳುವಳಿ ನಡೆಸಿದರು.
ನಗರದ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಗರದ ಪಾವಗಡ ರಸ್ತೆ ನೀಲಕಂಠೇಶ್ವರ ದೇವಸ್ಥಾನದಿಂದ ತಾಲ್ಲೂಕು ಕಛೇರಿಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಹಶಿಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ ಮಾತನಾಡಿ,
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ರೈತರು ಬರಗಾಲದ ಭವಣೆಯಲ್ಲಿ ಇದ್ದು ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ರೈತರು ಹಗಲು ಇರುಳು
ದುಡಿದು ನಾಡ ಜನರು ಬದುಕಲೆಂದು ದವಸಧಾನ್ಯ ಬೆಳೆಯುವ ರೈತರು ಸಾಲ ಮಾಡಿ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸಲು ಚಿಂತಿಸುವ
ಸ್ಥಿತಿಯಲ್ಲಿದ್ದಾರೆ. ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ “ಭದ್ರಾ ಮೇಲ್ದಂಡೆ ಯೋಜನೆ” ಕಾಮಗಾರಿ
ಇತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷದಿಂದ 5300 ಕೋಟಿ ಹಣ ನೀಡುವ ಸುಳ್ಳು ಭರವಸೆ ನೀಡಿದ್ದು ಇದು ಸರಿಯೇ ? ಇದನ್ನು
ಎಚ್ಚರಿಸಲು ಏಳೀ ಎದ್ದೇಳಿ ರೈತಬಾಂಧವರೇ ಆಳುವ ಸರ್ಕಾರಗಳನ್ನು ಪ್ರತಿಭಟಿಸುವ ಮೂಲಕ ಎಚ್ಚರಿಸೋಣ ಎಂದು ಆಕ್ರೋಶ ಹೊರಹಾಕಿದರು.
ಪ್ರಮುಖ
ಹಕ್ಕೊತ್ತಾಯಗಳು
1) ಬರ ಪರಿಹಾರವನ್ನು ಎಲ್ಲಾ ರೈತರ ಖಾತೆಗೆ ಜಮೆ ಮಾಡಬೇಕು.
2) ಬೆಳೆ ಸಮೀಕ್ಷೆಯ ತಪ್ಪು ವರದಿಯಿಂದ ಅನ್ಯಾಯಕ್ಕೆ ಒಳಗಾಗಿರುವ ಬೆಳೆ ವಿಮೆಯಿಂದ ವಂಚಿತರಾಗಿರುವ ರೈತರಿಗೆ ಬೆಳೆ ವಿಮೆ ನೀಡಬೇಕು.
3) ಸಿದ್ದೇಶ್ವರನದುರ್ಗ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಎಲ್ಲಾ ಹಳ್ಳಿಗಳ ರೈತರಿಗೆ ಬೆಳೆ ಸಮೀಕ್ಷೆ ಅವೈಜ್ಞಾನಿಕ ಕಾರಣದಿಂದ ಎಕರೆಗೆ 2100 ರೂ. ನೀಡಿದ್ದು
ಪುನಹ ಪರಿಶೀಲಿಸಿ ನ್ಯಾಯ ನೀಡಬೇಕು.
4) ಬಗರ್‌ಹುಕುಂ ಯೋಜನೆಯಲ್ಲಿ ಅಕ್ರಮ ಸಕ್ರಮದಲ್ಲಿ ಉಳುಮೆ ಮಾಡುವ ಎಲ್ಲಾ ರೈತರಿಗೆ ಸಾಗುವಳಿ ಪತ್ರ ನೀಡಬೇಕು.
5) ಹಿಂದೆ ಅಕ್ರಮ ಸಕ್ರಮದಡಿಯಲ್ಲಿ ಸಾಗುವಳಿ ಪತ್ರ ಪಡೆದು ಸಕ್ರಮಗೊಂಡಿರುವ ಎಲ್ಲಾ ರೈತರಿಗೆ ಜಮೀನು ದುರಸ್ತಿ ಮಾಡಿ ಹದ್ದುಬಸ್ತು ಮಾಡಬೇಕು.
6) ಹಿಂದೆ ವಿದ್ಯುತ್ ಸರಬರಾಜುಗೆ 25000 ರೂ. ಹಣ ನೀಡಿ ಟಿಸಿ ಇತರೆ ಸಲಕರಣೆ ನೀಡಿ ವಿದ್ಯುತ್ ನೀಡುತ್ತಿದ್ದರು ಅದನ್ನೇ ಮುಂದುವರಿಸಬೇಕು.
7) ಕೇಂದ್ರ ಸರ್ಕಾರ ನೀಡುವ ಪಿ.ಎಂ. ಕಿಸಾನ್ ಯೋಜನೆಯನ್ನು ಕುಟುಂಬದಲ್ಲಿ ಪಡಿತರ ಚೀಟಿಗೆ ಒಬ್ಬರಂತೆ ಪಿ.ಎಂ. ಕಿಸಾನ್ ನೀಡಬೇಕೆಂದು ಸರ್ವ ಕಾರ್ಯ
ನಡೆಯುತ್ತಿದೆ. ಇದನ್ನು ರದ್ದು ಮಾಡಿ ಎಲ್ಲಾ ಸಾಗುವಳಿದಾರರಿಗೆ ಯಥಾಸ್ಥಿತಿ ಮುಂಜೂರು ಕೊಡಬೇಕು.
8) ಪಡಿತರ ಚೀಟಿಗೆ ಅರ್ಜಿ ಹಾಕಲು ಕಾಲಾವಕಾಶ ನೀಡಬೇಕು. ತಿದ್ದುಪಡಿಗೂ ಅವಕಾಶ ನೀಡಬೇಕು. ಹೆಸರು ಸೇರ್ಪಡೆಗೂ ಅವಕಾಶ ನೀಡಬೇಕು.
ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಶಾಂತಣ್ಣ , ಜಂಪಣ್ಣ , ಎಚ್ ಪ್ರಕಾಶ್, ಹನುಮಂತ ರಾಯ, ನವೀನ ಗೌಡ, ಪರಮೇಶಪರಪ್ಪ, ಕೊಂಡಲಿ , ಅಣ್ಣಪ್ಪ ಸ್ವಾಮಿ, ಆಲೂರಾಮೇಶ್ವರ, ರಾಜಣ್ಣ, ಶ್ರೀಕಂಠಣ್ಣ, ಸುಬೇಂದ್ರಪ್ಪ, ಶಿವಣ್ಣ, ಚೆನ್ನಕೇಶವ , ಇತರ ಮಹಿಳಾ ರೈತರು ಭಾಗವಹಿಸಿದ್ದರು.