ಚಳ್ಳಕೆರೆ :

ವಲಸೆ ಗ್ರಾಮದಲ್ಲಿ 134 ನೇ ಡಾ.ಬಿ.ಆರ್.ಜಯಂತೋತ್ಸವ . ಅದ್ದೂರಿ ಆಚರಣೆ

ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಆದಿ ಜಾಂಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮಿ.

ಚಳ್ಳಕೆರೆ :

ಇಂದಿನ ಯುವಕರು ದೇವಸ್ಥಾನಗಳ ಗಂಟೆಗಳ ಶಬ್ದ ಕೇಳಬೇಡಿ ಶಾಲೆಗಳ ಗಂಟೆ ಶಬ್ದ ಕೇಳಿ ಎಂದು ಶ್ರೀ ಆದಿ ಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಹೇಳಿದ್ದಾರೆ.

ತಳಕು ಹೊಬಳಿಯ ವಲಸೆ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ ವತಿಯಿಂದ 134ನೇ ಡಾ. ಬಿ.ಆರ್. ಅಂಬೇಡ್ಕರ್ ಜಯಂತೋತ್ಸವದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮತ್ತು ಧ್ವಜಾರೋಹಣವನ್ನು ನೆರವೇರಿಸಿ. ದೀಪ ಬೆಳಗುವ ಮುಖಾಂತರ ಉದ್ಘಾಟಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು

ಸಂವಿಧಾನದ ಮೂಲ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ಡಾ
ಬಿ .ಅರ್ ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸಲು ದೇಶದ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ಗ್ರಾಮದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.

ಆದಿ ಜಾಂಬವ ಅಭಿವೃದ್ಧಿ ನಿಗಮದ ರಾಜ್ಯಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿ ಬಡತನವನ್ನು ಶಿಕ್ಷಣದಿಂದ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯ.
ಡಾ. ಬಿ ಆರ್. ಅಂಬೇಡ್ಕರ್ ಅವರು ಇಡೀ ವಿಶ್ವವೇ ಮೆಚ್ಚುವಂತ ಸಂವಿದಾನವನ್ನು ನಮಗೆ ನೀಡಿದ್ದಾರೆ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮತ್ತು ಆಶ್ರಯಗಳನ್ನ ಈಡೇರಿಸಲು ಪ್ರತಿಯೊಬ್ಬ ಗ್ರಾಮದ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಸಮ ಸಮಾಜದ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ದ್ರಾಕ್ಷರಸ ನಿಗಮ ಮಂಡಳಿ ರಾಜ್ಯ ಅಧ್ಯಕ್ಷ ಡಾ. ಯೋಗೇಶ್ ಬಾಬು ಮಾತನಾಡಿ ಡಾ. ಬಿ ಆರ್. ಅಂಬೇಡ್ಕರ್ ಅವರು ತಮ್ಮ ಜೀವಿತದ ಅವಧಿಯಲ್ಲಿ ಅನೇಕ ಹೋರಾಟ ನೋವು ನಲಿವು ಕಷ್ಟಗಳನ್ನ ಪಟ್ಟು ಇಡೀ ದೇಶವೇ ಮೆಚ್ಚುವಂತ ಸಂವಿಧಾನವನ್ನು ಕೊಟ್ಟಿದ್ದಾರೆ
ಮೀಸಲಾತಿ ಬದಲಾವಣೆ ಮಾಡುತ್ತೇವೆ ಎಂಬ ವ್ಯಕ್ತಿಗಳು ಪಾರ್ಲಿಮೆಂಟ್ ನಲ್ಲಿ ಸಂವಿಧಾನದ ಅಡಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದ್ದಾರೆ ಇದು ಡಾ. ಬಿಆರ್ ಅಂಬೇಡ್ಕರ್ ಕೊಟ್ಟಂತ ಕೊಡುಗೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣದಿಂದ ಮಾತ್ರ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯ ಎಂದರು.

ಇನ್ನೂ ರಾಜ್ಯ ಸಂಚಾಲಕರು ಕೆಪಿಸಿಸಿ ಪರಿಶಿಷ್ಟ ವಿಭಾಗದ ವಕೀಲ ಹಿರೇಹಳ್ಳಿ ಮಲ್ಲೇಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ತಿಪ್ಪಕ್ಕ ಮಲ್ಲೇಶ್. ಮಾತನಾಡಿದರು.

ವಕೀಲರು ಮತ್ತು ಹೋರಾಟಗಾರರು ಪ್ರಗತಿಪರ ಚಿಂತಕರಾದ ಬಿ ಎಂ ಹನುಮಂತಪ್ಪ. ಪ್ರೊಫೆಸರ್ ಲಿಂಗಪ್ಪ ನಿವೃತ್ ಪ್ರಾಂಶುಪಾಲರು ಚಿತ್ರದುರ್ಗ. ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ವಿರಭದ್ರಯ್ಯ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಎಚ್ ಸಮರ್ಥರಾಯ್, ಡಿಎಸ್ಎಸ್ ಸಂಚಾಲಕ ಟಿ ವಿಜಯ್ ಕುಮಾರ್, ಚಳ್ಳಕೆರೆ ಆರೋಗ್ಯ ಇಲಾಖೆ ಎಸ್ ಬಿ.ತಿಪ್ಪೇಸ್ವಾಮಿ ಕುದಾಪುರ, ಆರ್. ವೀರಭದ್ರಪ್ಪ ಡಿಎಸ್ಎಸ್ ಚಳ್ಳಕೆರೆ, ಎಸ್ ಕೆ ಸುರೇಶ್ ವಕೀಲರು ಬಂಜಿಗೆರೆ, ಬುದ್ಧ ಬಸವ ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಎಂ. ವೆಂಕಟೇಶ್ ಬಂಜಿಗೆರೆ, ಬಿ. ಮಲ್ಲೇಶಪ್ಪ ಕರ್ನಾಟಕ ಲೋಕಾಯುಕ್ತ ಸರ್ಕಾರಿ ಅಭಿಯೋಜಕರು ಚಿತ್ರದುರ್ಗ, ಬಿ ವಿ ರವಿಕುಮಾರ್ ಕೆಇಬಿ ಬಂಜಿಗೆರೆ. ಎಂ.ರಾಜಣ್ಣ ಕೆ ಎಸ್ ಆರ್ ಟಿ ಸಿ ವಲಸೆ, ಟಿ ಎನ್ ಸುರೇಶ್ ಉಪನ್ಯಾಸಕರು ದಾವಣಗೆರೆ, ರುದ್ರೇಶ್ ಗ್ರಾಮ ಪಂಚಾಯತಿ ಸದಸ್ಯರು ವಲಸೆ. ಲೋಕೇಶ್ ಗ್ರಾಮಪಂಚಾಯತಿ ಸದಸ್ಯರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತ ಕಾರ್ಯದರ್ಶಿ ಎನ್ ದೇವರಹಳ್ಳಿ ಟಿ. ರಾಜಣ್ಣ.

ವಲಸೆ ಗ್ರಾಮದ ಹಟ್ಟಿ ಯಜಮಾನರು ರುದ್ರಪ್ಪ, ಮಹಾಂತೇಶ್, ಕೆ.ಕಳಸಪ್ಪ, ಜಿ.ವಿ. ಲಕ್ಷ್ಮಣ, ಮುನಿಯಪ್ಪ, ಜಯಣ್ಣ, ತಿಪ್ಪೇಸ್ವಾಮಿ, ಡಿ.ಗುರುಮೂರ್ತಿ, ಎನ್.ಮಾರಣ್ಣ, ತಿಪ್ಪೇಸ್ವಾಮಿ, ಮಂಜುನಾಥ್, ಪೂಜಾರ್ ತಿಪ್ಪೇಸ್ವಾಮಿ, ಜಂಗಮಯ್ಯ, ಎನ್ ಜಯಣ್ಣ, ಪರಮೇಶ್ವರಪ್ಪ, ಯಲ್ಲಪ್ಪ, ಕೆ.ಕೆ.ಎಂ. ಕರಿಯಣ್ಣ, ತಿಪ್ಪೇಸ್ವಾಮಿ, ಎಂ.ನಾಗರಾಜ್, ಸೇರಿದಂತೆ.
ಇನ್ನೂ ಡಾ. ಬಿ.ಆರ್. ಅಂಬೇಡ್ಕರ್ ರವರ ಕುರಿತು ಕ್ರಾಂತಿ ಗೀತೆಗಳನ್ನು ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ಹಾಡಿದರು

ವಲಸೆ ಗ್ರಾಮದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸಮಸ್ತ ಗ್ರಾಮಸ್ಥರು ಇದ್ದರು

Namma Challakere Local News

You missed

error: Content is protected !!