ಚಳ್ಳಕೆರೆ : ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾದರೂ ಮೀಸಲಾತಿ ಅವಶ್ಯವಾಗಿದೆ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಮೀಸಲಾತಿ ಹೆಚ್ಚಿಸಬೇಕೆಂದು ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೆವೆ, ಆದರೆ ಮೀಸಲಾತಿ ಹೆಚ್ಚಿಸುವುದಾಗಿ ಸರ್ಕಾರ ಭರವಸೆಯನ್ನು ನೀಡುತ್ತಿದೆಯೇ ಹೊರತು ಮೀಸಲಾತಿ ಹೆಚ್ಚಿಸಿಲ್ಲ ಎಂದು ಶಾಸಕ ಟಿ.ರಘುಮೂರ್ತಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೋರಾಟ ಕ್ರಿಯಾಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಮಾಡುವಂತೆ ಮೇ.20 ಬೃಹತ್ ಪ್ರತಿಭಟನೆ ಮಾಡುವ ಮೂಲಕ ಸ್ವಯಂ ಪ್ರೇರಿತ ಬಂದ್ ನಗರದಲ್ಲಿ ಮಾಡುವ ಮೂಲಕ ನಮ್ಮ ಹಕ್ಕು ಪಡೆಯಬೇಕಿದೆ.
ಇಂದಿಗೆ ಸ್ವಾಮೀಜಿಗಳ ಸತತ ಹೋರಾಟ ಮಾಡಿದರು ಕೂಡ ಸರಕಾರ ಕಿವಿಗೊಡುತ್ತಿಲ್ಲ, ರಾಜ್ಯದ 224 ಕ್ಷೇತ್ರದ ಶಾಸಕರು ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ತಾಲೂಕಿನಲ್ಲಿ ಮೇ.20 ರಂದು ನಗರದ ಎಲ್ಲಾ ಅಂಗಡಿ ಮುಗ್ಗಟ್ಟುಗಳು, ಕಿರಾಣಿ ವರ್ತಕರು, ಬಟ್ಟೆ ಅಂಗಡಿ, ಬೀದಿ ಬದಿಯ ವ್ಯಾಪಾರಸ್ಥರು ಈಗೇ ಪ್ರತಿಯೊಬ್ಬರು ಈ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿ ಸ್ವಯಂ ಪ್ರೇರಿತವಾಗಿ ಅಘೋಷಿತ ಬಂದ್ ಮಾಡುತ್ತೆವೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ನಮ್ಮ ಹೋರಾಟ ಕೇವಲ ಮೀಸಲಾತಿಗೆ ಹೊರತು ಬೆರೆ ಉದ್ದೇಶವಿಲ್ಲ, ಇಲ್ಲಿ ಎಲ್ಲಾ ಪಕ್ಷಾತೀತವಾಗಿ ಹೋರಾಟ ಮಾಡುತ್ತೆವೆ,
ಸಾವಿರಾರು ಮೀಸಲಾತಿ ಹೋರಾಟಗಾರರ ಮೂಲಕ ಚಿತ್ರದುರ್ಗ ರಸ್ತೆಯ ಜಗಜೀವನ್ ರಾಮ್ ವೃತ್ತದಿಂದ ಪ್ರಮುಖ ರಾಜ ಬೀದಿಗಳಲ್ಲಿ ಪ್ರತಿಭಟನೆ ಸಾಗಿ ನೆಹರು ವೃತ್ತದಿಂದ ತಾಲೂಕು ಕಚೇರಿಗೆದಾವಿಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ರವಾನಿಸಲಾಗುವುದು ಎಂದಿದ್ದಾರೆ.
ನಮ್ಮ ಅನಿವಾರ್ಯ ಹೋರಾಟಕ್ಕೆ ನಗರದ ಸಂಘಸಂಸ್ಥೆಗಳು, ವರ್ತಕರು ವ್ಯಾಪಾರಸ್ಥರು ಬೆಂಬಲ ನೀಡುತ್ತೆವೆ ಎಂದು ವ್ಯಕ್ತಪಡಿಸಿದ್ದಾರೆ.2018 ಚುನಾವಣೆಯ ಸಂಧರ್ಭದಲ್ಲಿ ಆಶ್ವಾಸನೆ ನೀಡಿದ ಸರಕಾರ ಇನ್ನೂ ಈಡೇರಿಸಿಲ್ಲ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಮಾತನಾಡಿ, ರಾಜನಹಳ್ಳಿಯಿಂದ ಬೆಂಗಳೂರು ನಗರದವರೆಗೆ ಸ್ವಾಮೀಜಿ ಪಾದಯಾತ್ರೆ ಮಾಡಿದ್ದರು, ಆದರೆ ಇಂದಿಗೆ ಆದೇಶ ನೀಡಿ ಸುಮಾರು 22 ತಿಂಗಳಾದರೂ ಮೀಸಲಾತಿ ನೀಡಿಲ್ಲ, ಸರಕಾರಕ್ಕೆ ಚುನಾವಣೆ ಸಮಯದಲ್ಲಿ ಮಾತ್ರ ಆಶ್ವಾಸನೆ ನೀಡಿ ಮುಂದೆ ಹಾಕುವ ಪ್ರಯತ್ನ ಮಾಡುತ್ತಿದೆ, ನಗರದಲ್ಲಿ ಅಹಿತಕರ ಘಟನೆ ನಡೆಯದ ಶಾಂತಿ ರೀತಿಯಲ್ಲಿ ನಮ್ಮ ಹಕ್ಕಿಗಾಗಿ ಹೋರಾಟ ಮಾಡೊಣ ನಮ್ಮ ಕೂಗು ತಾರ್ತಿಕ ಅಂತ್ಯದ ವರೆಗೂ ನಿಲ್ಲುವುದಿಲ್ಲ. ನೂರನೇ ದಿನದವೆಗೆ ಕಾಯಿಸದೆ ಸ್ವಾಮೀಜಿ ಹೊರಾಟಕ್ಕೆ ಸರಕಾರ ಮಣಿಯಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವೀರಭದ್ರಯ್ಯ, ಬಿ.ಟಿ.ರಮೇಶ್ ಗೌಡ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್‌ಮೂರ್ತಿ, ತಿಪ್ಪೇಸ್ವಾಮಿ, ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ವೆಂಕಟೇಶ್, ಮಾಜಿ ಪುರಸಭೆ ಸದಸ್ಯ ಚೇತನ್ ಕುಮಾರ್, ಮುಖಂಡರಾದ ಅಂಜಿನಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ವಿಜಯಕುಮಾರ್, ಚಂದ್ರು, ಭೀಮನಕೆರೆ ಶಿವಮೂರ್ತಿ, ಪ್ರಕಾಶ್ ಚೌಳೂರು , ಭರಮಣ್ಣ, ಲಕ್ಷ್ಮೀದೇವಿ ಹಾಗೂ ಸರ್ಕಾರಿ ನೌಕರರಾದ ವೀರಭದ್ರಸ್ವಾಮಿ, ಸೂರನಾಯಕ, ಸಿ.ಟಿ.ವೀರೇಶ್, ಎಲ್‌ಐಸಿ ತಿಪ್ಪೇಸ್ವಾಮಿ, ಬೆಸ್ಕಾಂ ನಾಗರಾಜ್, ಗುರುರಾಜ ಉಪಾಧ್ಯಕ್ಷ ಹೊಟೆಲ್ ಮಾಲೀಕ, ಛೆಂಬರ್ ಆಪ್ ಕಾಮರ್ಸ್ ವೀರಣ್ಣ, ಬೀದಿಬದಿಯ ವ್ಯಾಪಾರ, ಶಿವರುದ್ರಪ್ಪ, ಹಮಾಲರ ಸಂಘದ ತಿಪ್ಪೇಸ್ವಾಮಿ, ಗಾಡಿ ತಿಪ್ಪೇಸ್ವಾಮಿ, ಕಿಸಾನ್ ಜುಯ್ಯಲಾರ್ ಸಂಘದ ಸುಶೀಲ, ಪ್ರಶಾಂತ್, ಆಮ್‌ಆದ್ಮಿ ಪಕ್ಷದ ಪಾಪಣ್ಣ, ಮಾದಿಗ ದಂಡೋರ ಸಮಿತಿಯ ಜಿಲ್ಲಾ ಅಧ್ಯಕ್ಷ ತಿಪ್ಪೇಸ್ವಾಮಿ, ನಾಯಕ ಸಮುದಾಯದ ಅಧ್ಯಕ್ಷ ಮಲ್ಲಪ್ಪನಾಯಕ, ದಳವಾಯಿಮೂರ್ತಿ, ಜಗನ್ನಾಥ್, ವೀರೇಂದ್ರಪ್ಪ, ಚೌಳೂರು ಪ್ರಕಾಶ್, ದೊಡ್ಡಉಳ್ಳಾರ್ತಿ ಕರಿಯಣ್ಣ, ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಮತ್ತು ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.