ರಾಜ್ಯದಲ್ಲೆ ಎರಡನೇ ಅತೀ ದೊಡ್ಡ ತಾಲೂಕು ಸಾರ್ವಜನಿಕ ಆಸ್ವತ್ರೆ ಚಳ್ಳಕೆರೆಗೆ ಸು.11ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರ ಕೊಡುಗೆ
: ಮೈಸೂರಿನ ಬ್ಯಾಂಕ್ ನೋಟ್ ಮಿಲ್ ಇಂಡಿಯಾ ಪ್ರೈ.ಲಿ..ನ ವ್ಯವಸ್ಥಾಪಕ ನಿದೇರ್ಶಕರಾದ ತಾಳಿಕೇರಪ್ಪ

ಚಳ್ಳೆಕೆರೆ : ರಾಜ್ಯದಲ್ಲೆ ಎರಡನೇ ಅತೀ ದೊಡ್ಡ ತಾಲೂಕು ಸಾರ್ವಜನಿಕ ಆಸ್ವತ್ರೆಗೆ ಬರುವ ರೋಗಿಗಳ ಗಮನದಲ್ಲಿರಿಸಿಕೊಂಡು ಮೈಸೂರಿನ ಬ್ಯಾಂಕ್ ನೋಟ್ ಮಿಲ್ ಇಂಡಿಯಾ ಪ್ರೈ.ಲಿ..ಮೈಸೂರು ಇವರಿಂದ ಕೊಡುಗೆಯಾಗಿ ನೀಡಿದ ಸುಮಾರು 11ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರವನ್ನು ದಾನವಾಗಿ ನೀಡಲಾಗಿದೆ ಎಂದು ಮೈಸೂರಿನ ಬ್ಯಾಂಕ್ ನೋಟ್ ಮಿಲ್ ಇಂಡಿಯಾ ಪ್ರೈ.ಲಿ..ನ ವ್ಯವಸ್ಥಾಪಕ ನಿದೇರ್ಶಕರಾದ ತಾಳಿಕೇರಪ್ಪ ಹೇಳಿದರು.
ಅವರು ನಗರದ ಸಾರ್ವಜನಿಕರ ಆಸ್ವತ್ರೆಯಲ್ಲಿ ನೂತನವಾಗಿ ಡಯಾಲಿಸಿಸ್ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ನನ್ನ ಹುಟ್ಟಿದ ತಾಲೂಕು ಹಾಗು ನನ್ನ ಹುಟ್ಟೂರಿಗೆ ಏನಾದರೂ ಮಾಡಬೇಕು ಎಂಬ ತುಡಿತದಿಂದ ನಮ್ಮ ಬ್ಯಾಂಕ್ ನೋಟ್ ಮಿಲ್ ಇಂಡಿಯಾ ಪ್ರೈ.ಲಿ.ನಿಂದ ಸುಮಾರು 11 ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರವನ್ನು ನೀಡಿದೆ ಅದರಂತೆ ತಾಲೂಕಿನ ಮನ್ನೆಕೋಟೆ ಗ್ರಾಮಕ್ಕೆ ಸುಮಾರು 85.ಲಕ್ಷ ವೆಚ್ಚದ ಸಮುದಾಯ ಭವನಕ್ಕೆ ಅನುದಾನ ನೀಡಿದೆ ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಯುತ್ತದೆ ಎಂದರು..
ಇದೇ ಸಂಧರ್ಭದಲ್ಲಿ ಶಾಸಕ ಟಿ.ರಘುಮೂರ್ತಿ ನೂತನ ಡಯಾಲಿಸಿಸ್ ಯಂತ್ರವನ್ನು ಉದ್ಘಾಟನೆ ಮಾಡಿ ಮಾತನಾಡಿ, ಕೇವಲ ಒಂದೇ ಒಂದು ಡಯಾಲಿಸಿಸ್ ಯುನಿಟ್ ಇದ್ದು, ಈಗ 5 ಯುನಿಟ್‌ಗಳಿಗೆ, ಉನ್ನತೀಕರಿಸಲಾಗಿದೆ. ಒಟ್ಟಾರೆ ಸರಕಾರಿ ಆಸ್ವತ್ರೆಗೆ ಇಚ್ಚಾಶಕ್ತಿ ಇರುವ ದಾನಿಗಳು ಸುಮಾರು 5 ಡಯಾಲಿಸ್ ಯಂತ್ರಗಳನ್ನು ನೀಡಿರುವುದು ಸಂತಸ ತಂದಿದೆ, 5 ಡಯಾಲಿಸಿಸ್ ಯಂತ್ರದಿAದ ಸು.20 ಪ್ರಕರಣಗಳು ದಿನ 6 ರಿಂದ 8 ಸೈಕಲ್ಸ್ ನಡೆಯುತ್ತೆವೆ ಎಂದರು.
ಇದೇ ಸಂಧರ್ಭದಲ್ಲಿ ಬ್ಲಾಕ್ ಪಬ್ಲಿಕ್ ಹೆಲ್ತ್ ಯುನಿಟ್ ಸಾರ್ವಜನಿಕ ಆರೋಗ್ಯ ಘಟಕ, ರಾಷ್ಟ್ರೀಯ ಆರೋಗ್ಯ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ಕಾರ್ಯಕ್ರಮಗಳ ರಕ್ತ, ಮಲ, ಮೂತ್ರ ತಪಾಸಣೆ ಮೂಲಕ ದೃಡೀಕರಣ ಮತ್ತು ಅನುಸರಣಾ ಸೇವೆಗಳು, ಐಸೋಲೇಷನ್ ವಾರ್ಡ 20 ಹಾಸಿಗೆಗಳು, ರೋಗಗಳ ರಕ್ತ, ಮಲ, ಮೂತ್ರ, ತಪಾಸಣೆ ಅನುಸಾರಣ ಚಿಕಿತ್ಸೆ ಹಾಗೂ ರೆಫರಲ್ ಸೇವೆಗಳ ಸದರಿ ವಾರ್ಡಿನಲ್ಲಿ ನೀಡಲಾಗುವುದು ಎಂದು ತಾಲೂಕು ಆಡಳಿತ ಆರೋಗ್ಯಧಿಕಾರಿ ಡಾ.ವೆಂಕಟೇಶ್ ಮಾಹಿತಿ ನೀಡಿದರು.
ಇದೇ ಸಂಧರ್ಭದಲ್ಲಿ ಬ್ಯಾಂಕ್ ನೋಟ್ ಮಿಲ್ ಇಂಡಿಯಾ ಪ್ರೈ.ಲಿ..ಮೈಸೂರಿನ ಲಕ್ಷ್ಮೀಶ,, ಹಾಗೂ ಆರೋಗ್ಯ ರಕ್ಷ ಸಮಿತಿ ಅಧ್ಯಕ್ಷಕರು, ಸದಸ್ಯರು, ಹಾಗೂ ವೈಧ್ಯರು ಸಾರ್ವಜನಿಕರು ಸ್ಥಳದಲ್ಲಿ ಇದ್ದರು.

About The Author

Namma Challakere Local News
error: Content is protected !!