ಏನ್ರೀ ಸಿದ್ಧರಾಮಯ್ಯನವರೇ ನಮ್ಮ ವಾಲ್ಮೀಕಿ ನಿಗಮದ ಹಣವೇ ಬೇಕಾ ನಿಮಗೆ ?ಮಾಜಿ ಬಿಜೆಪಿ M,L.A, ತಿಪ್ಪೇಸ್ವಾಮಿ ,
ಚಳ್ಳಕೆರೆ ,
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಬಿಟ್ಟಿಭಾಗ್ಯಗಳನ್ನು ಕೊಟ್ಟು ಖಜನೆ ಖಾಲಿ ಮಾಡಿಕೊಂಡಿದೆ. ಸಿದ್ದರಾಮಯ್ಯನವರೇ ಬಿಟಿ ಭಾಗ್ಯ ಕೊಡಲಿಕ್ಕೆ ವಾಲ್ಮೀಕಿ ಹಾಗೂ AK ಜನಗಳ ದುಡ್ಡೇ ಬೇಕಾ ನಿಮಗೆ? ಎಂದು ಮೊಳಕಾಲ್ಮೂರು ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಗುಡುಗಿದ್ದರು,
ಇವರು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಮಾತನಾಡಿದ ಇವರು
ಕಾಂಗ್ರೆಸ್ ಸರ್ಕಾರ 187 ಕೋಟಿ ವಾಲ್ಮೀಕಿ ನಿಗಮದಿಂದ ಸಿದ್ದರಾಮಯ್ಯನವರ ಸರ್ಕಾರ ಕೊಳ್ಳೆ ಹೊಡೆದಿದೆ ,ಸ್ವಾಮಿ ಸಿದ್ರಾಮಯ್ಯನವರೇ ವಾಲ್ಮೀಕಿ ಸಮುದಾಯ ಹಾಗೂ ಏಕೆ ಸಮುದಾಯದಿಂದ ಈ ಹಣವನ್ನು ದುರುಪಯೋಗ ಮಾಡಿಕೊಂಡು ಬಿಟಿ ಭಾಗ್ಯಕ್ಕೆ ಹಣ ಬಳಕೆ ಮಾಡಿಕೊಂಡಿರುವುದು ಖಂಡನೀಯ,
ಇದು ಅಲ್ಲದೆ ವಾಲ್ಮೀಕಿ ಜನಾಂಗ ಹಾಗೂ AK ಜನಾಂಗದ ಒಟ್ಟು ಮೊತ್ತ 25,000 ಸಾವಿರ ಕೋಟಿ ಕಾಂಗ್ರೆಸ್ ಸರ್ಕಾರ ಹಣ ದುರ್ಬಳಕೆ ಮಾಡಿಕೊಂಡಿದೆ ಇತ್ತ ಜನಸಾಮಾನ್ಯರ ಹಾಲಿನ ದರ ನೀರಿನ ದರ ಪೆಟ್ರೋಲ್ ಡೀಸೆಲ್ ಕಂದಾಯ ತೆರಿಗೆ ದಿನಸಿ ವಸ್ತುಗಳ ಹೆಚ್ಚಿಸಿ ಸಾಮಾನ್ಯ ಜನರ ಹೊಟ್ಟೆಯ ಮೇಲೆ ಬರೆ ಎಳೆದಿದ್ದಾರೆ,
ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿ ಹಣ ಗಳಿಕೆ ಮಾಡಿಕೊಳ್ಳುತ್ತಿದ್ದಾರೆ.
ನಮ್ಮ ವಾಲ್ಮೀಕಿ ಸಮುದಾಯ ಹಾಗೂ ಏಕೆ ಸಮುದಾಯಗಳು ಕಾಂಗ್ರೆಸ್ ಸರ್ಕಾರಕ್ಕೆ ವೋಟ ಹಾಕಿಲ್ಲವಾ ಹಾಗಾದರೆ ನಮ್ಮ ಹಣವನ್ನು ಏಕೆ ದುರ್ಬಳಕೆ ಮಾಡಿಕೊಂಡಿದ್ದೀರಿ ಇದಕ್ಕೆ ಮುಖ್ಯಮಂತ್ರಿಗಳೇ ಹೊಣೆಗಾರಿಕೆಯಾಗಬೇಕು ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಅಲ್ಲದೆ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು ರಾಜೀನಾಮೆ ಘೋಷಿಸಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆಗೆ ನಾವು ಮುಂದಾಗುತ್ತೇವೆ ಎಂದು ತಿಳಿಸಿದರು