ಚಳ್ಳಕೆರೆ :
ಕಳೆದ ಹಲವಾರು ದಶಕಗಳಿಂದ ಉತ್ತರ ಕರ್ನಾಟಕದಲ್ಲಿ
ರಂಗಸೇವೆಯಲ್ಲಿ ನಿರತರಾಗಿರುವ ಕಲಾವಿದರ ತಂಡ ಸಹಕಲಾವಿದೆಯ
ವಿವಾಹ ಮಾಡಲು ಆರ್ಥಿಕ ನೆರವು ಕೋರಿ ಸಹಾಯಾರ್ಥ ನಾಟಕ
ಪ್ರದಶನವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಸಹಕಾರ ನೀಡುವಂತೆ
ಇಳಕಲ್ಲಿನ ರಂಗಸಂಗಮ ಕಲೆಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷೆ
ರೇಷ್ಮೆ ಸಿ.ಅಳವಂಡಿ ಮನವಿ ಮಾಡಿದರು.
ನಗರದ
ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ದಾವಣಗೆರೆ ವಸಂತ ಕಲಾನಾಟ್ಯ ಸಂಘದಿಂದ ಜು.7,ಸಂಜೆ
ಭಾನುವಾರ 6-30 ಕ್ಕೆ ಹಳ್ಳಿ ಹುಡುಗಿ ಮೊಸರುಗಡಿಗಿ ಎಂಬ
ಹಾಸ್ಯಬರಿತ ನಾಟವನ್ನು ಪ್ರದರ್ಶಿಸಲಿದ್ದಾರೆ.
ವೃತ್ತಿ ರಂಗಭೂಮಿ
ಕಲಾವಿದೆ ಭಾರತಿಯವರ ಸಹೋದರಿ ಮದುವೆಯ ಸಹಾಯರ್ಥ
ಪ್ರದರ್ಶನ ಇದಾಗಿದ್ದು, ಪಾವಗಡ ರಸ್ತೆಯ ಮಹಾಲಕ್ಷ್ಮಿ ಭೀಮಣ್ಣ
ಕಲ್ಯಾಣ ಮಂಟಪದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ
ಎಂದರು.
ಪುರಸಭೆ ಮಾಜಿ ಸದಸ್ಯ ಎಂ.ಚೇತನ್‌ಕುಮಾರ್,
ವಿಶ್ವಕರ್ಮಪರಿಷತ್ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್, ಖಾಸಗಿ
ಲ್ಯಾನ್ ಟೆಕ್ನಿಷನ್ ಅಸೋಸಿಯೇಷನ್ ಕಾರ್ಯದರ್ಶಿ
ಬಿ.ಫರೀದ್‌ಖಾನ್, ಭಾರತಿ, ಮಂಜುಳಾ ಮುಂತಾದವರು
ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾಟಕ ಅಕಾಡೆಮೆ ಮಾಜಿ
ಸದಸ್ಯ ಪಿ.ತಿಪ್ಪೇಸ್ವಾಮಿಯವರನ್ನು ಭೇಟಿ ಮಾಡಿದ ಕಲಾವಿದರು
ಬೆಂಬಲ ಕೋರಿದರು.ಟಿಕೇಟ್ ಗಾಗಿ ಸಂಪರ್ಕಿಸಿ :
ಐಕೇಟ್ ದರ 200 ರೂ ಮುಂಗಡ ಟಿಕೇಟ್ ಗಾಗಿ 9148639269,
9110247142 ಸಂಪರ್ಕಿಸಲು ಕೋರಿದೆ