ಚಳ್ಳಕೆರೆ : ಬಾಗಲಕೋಟೆ ಮಹಿಳಾ ವಕೀಲರಾದ ಸಂಗೀತ
ಸಿಕ್ಕೇರಿ ಇವರ ಮೇಲೆ ಬಾಗಲಕೋಟೆಯ ಸಾರ್ವಜನಿಕರ
ಸ್ಥಳದಲ್ಲಿಯೇ ಕಾಲುಗಳಿಂದ ಹೊಡೆದು ಹಲ್ಲೆ ಮಾಡಿರುವುದು ಖಂಡನೀಯ ಸರಕಾರ ಈ ಕೂಡಲೆ ಕಾನೂನು ಕ್ರಮ ಜರುಗಿಸಬೇಕು ಎಂದು ವಕೀಲರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಎನ್ ರಘುಮೂರ್ತಿ ಗೆ ಮನವಿ ನೀಡಿದರು.
ಚಳ್ಳಕೆರೆ ವಕೀಲರ ಸಂಘದ ಅಧ್ಯಕ್ಷ ಆನಂದ ಮಾತನಾಡಿ, ಮೇ
14 ರಂದು ಬಾಗಲಕೋಟೆ ನಗರದ ಸಾರ್ವಜನಿಕರ
ಸ್ಥಳದಲ್ಲಿಯೇ ವಿನಾಯಕ ನಗರದ ವಾಸಿಯಾದ ಮಹಂತೇಶ ಚೋಳಚಗುಡ್ಡ
ಇವರು ಮಹಿಳಾ ವಕೀಲರಾದ ಸಂಗೀತ ಸಿಕ್ಕೇರಿ ಎಂಬುವವರನ್ನು ಕಾಲಿನಿಂದ ಒದ್ದು ಅಮಾನವೀಯ ಕೃತ್ಯವನ್ನು ಎಸಗಿರುತ್ತಾರೆ ಎಂದು ಮನವಿಯನ್ನು ನೀಡಿದರು.
ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ, ನಿಮ್ಮ ಮನವಿಯನ್ನು ಯಥಾವತ್ತಾಗಿ ಸರಕಾರಕ್ಕೆ ರವಾನಿಸಲಾಗುವುದು ಎಂದು ಹೇಳಿದರು.
ಈ ರೀತಿಯ
ವಕೀಲರ ಮೇಲೆ ಇತ್ತೀಚಿನ ದಿನಗಳಲ್ಲಿ ಹಲ್ಲೆ ನಡೆಸುತ್ತಿರುವುದು ವಕೀಲ ವೃತ್ತಿ ನಿರ್ವಹಿಸುತ್ತಿರುವ ವಕೀಲವೃಂದಕ್ಕೆ ಆತಂಕದ ವಾತಾವರಣವನ್ನು ಸೃಷ್ಟಿ
ಮಾಡುತ್ತಿದೆ.
ಇಂತಹ ಘಟನೆಗಳಿಂದ ವಕೀಲರುಗಳಿಗೆ ರಕ್ಷಣೆ ನೀಡುವ
ಕುರಿತು ವಕೀಲ ರಕ್ಷಣಾ ಕಾಯಿದೆ ಶೀಘ್ರವಾಗಿ ಜಾರಿಗೆ ತರುವಂತೆ
ಕಾರ್ಯಸೂಚಿಗಳನ್ನು ರಚಿಸುವುದರ ಮೂಲಕ ವಕೀಲರುಗಳಿಗೆ ರಕ್ಷಣೆ
ನೀಡಬೇಕೆಂದು ಮತ್ತು ಈ ಮೇಲ್ಕಂಡ ಕೃತ್ಯವನ್ನು ಚಳ್ಳಕೆರೆ ವಕೀಲರ
ಸಂಘವು ಖಂಡಿಸುತ್ತಾ ಅತೀಶೀಘ್ರವಾಗಿ ವಕೀಲರ ರಕ್ಷಣಾ ಕಾಯಿದೆಯನ್ನು
ಜಾರಿಗೆ ತರುವಂತೆ ಮತ್ತು ವಕೀಲರ ಮೇಲೆ ಹಲ್ಲೆ ಮಾಡಿರುವ
ಆರೋಪಿಯನ್ನು ಶೀಘ್ರವೇ ಬಂಧಿಸಿ,
ಸೂಕ್ತ ಕಾನೂನು ಕ್ರಮ ಕೈಗೊಳ್ಳಲು
ಒತ್ತಾಯಿಸಿ ಚಳ್ಳಕೆರೆ ವಕೀಲರ ಸಂಘದ ಸಹಕಾರ ಬೆಂಬಲವನ್ನು
ಸೂಚಿಸುತ್ತಾ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ
ಸರ್ಕಾರದ ಮುಖಾಂತರ
ಮೆಮೊರೆಂಡಮ್
ಕಳುಹಿಸಿಕೊಡಬೇಕಾಗಿ ಈ ಮೂಲಕ ಒತ್ತಾಯಿಸುತ್ತದೆ.
ಈದೇ ಸಂದರ್ಭದಲ್ಲಿ ವಕೀಲರಾದ ರಾಘವೇಂದ್ರ, ಉಪೇಂದ್ರಕುಮಾರ್, ಕಾಂತರಾಜ್,ರುದ್ರಯ್ಯ, ನಾಗರಾಜ್, ಜಗದೀಶ್ ನಾಯಕ, ಕುಮಾರ್, ಕೆ.ಟಿ.ರುದ್ರೇಶ್,ಸಿದ್ದರಾಜ್, ಪಾಲಯ್ಯ, ಶೇಖರಪ್ಪ, ಮಧುಮತಿ, ಇತರರು ಪಾಲ್ಗೊಂಡಿದ್ದರು.