ಚಳ್ಳಕೆರೆ ನ್ಯೂಸ್ :
ಗ್ರಾಮದ ಜಲಮೂಲವಾದ ಪುರಾತನ ಕೆರೆಯಲ್ಲಿ ನೀರು ಸೋರಿಕೆಯಾಗುತ್ತಿರುವ ಬಗ್ಗೆ ನಮ್ಮ ಚಳ್ಳಕೆರೆ ಟಿವಿ ಸುದ್ದಿ ಪ್ರಕಟಿಸಿದ ಹಿನ್ನಲೆಯಲ್ಲಿ
ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇನಾಯಿತ್ ಬಾಷ ಸ್ಥಳಕ್ಕೆ ಬೇಟಿ ನೀಡಿ ಕೆರೆ ಏರಿ ಮೇಲೆ ಬೆಳೆದಿರುವ ಬಳ್ಳಾರಿ ಜಾಲಿ ಗಿಡಗಳನ್ನು ತೆಗೆಸುವ ಮೂಲಕ ಕೆರೆ ಸಂರಕ್ಷಣೆಗೆ ಪಣತೊಟ್ಟಿದ್ದಾರೆ.
ಹೌದು ಚಳ್ಳಕೆರೆ ತಾಲೂಕಿನ
ನನ್ನಿವಾಳ ಗ್ರಾಮದ ಕೆರೆಯ ನೀರು ಸುತ್ತಲಿನ ಹತ್ತು ಹಳ್ಳಿಗಳ ಜನರ ಜೀವನಾಡಿ ಕೆರೆಯಾಗಿದೆ.
ಅದರೆ ಇತ್ತೀಚಿನ ದಿನಗಳಲ್ಲಿ ಕೆರೆ ಏರಿಮೇಲೆ ಗಿಡಗಳು ಬೆಳೆದು ಕೆರೆಏರಿ ಬಿರುಕು ಬಿಟ್ಟು ಸಣ್ಣ ಪುಟ್ಟ ರಂಧ್ರಗಳ ಮೂಲಕ ನೀರಿನ ತೇವಾಂಶ ಕಂಡುಬಂದ ಹಿನ್ನಲೆಯಲ್ಲಿ ಕೆರೆ ಏರಿ ಮೇಲೆ ಬೆಖೆದಿರುವ ಗಿಡಗಳನ್ನು ಸಂಪೂರ್ಣವಾಗಿ ತೆರುವು ಮಾಡಿಸಿ ಕೆರೆ ಸಂರಕ್ಷಣೆಗೆ ಕಂಕಣ ಬದ್ದರಾಗಿದ್ದಾರೆ.
ಇನ್ನೂ ಕೆರೆ ತುಂಬಿದ ನಂತರ ಕಾಲುವೆಗಳಿಗೆ ಹರಿಸಲು ವಾಲ್ ಹಾಗೂ ಇತರೆ ಸ್ಥಳಗಳನ್ನು ಪರಿಶೀಲನೆ ಮಾಡಿ ಬಯಲು ಸೀಮೆಯ ಕೆರೆಗೆ ಜೀವಕಳೆ ನೀಡಿದ್ದಾರೆ.