ಚಳ್ಳಕೆರೆ ನ್ಯೂಸ್ :
ತುರ್ತು ಇರುವ ಫಲಾನುಭವಿಗಳಿಗೆ
ಮೊದಲು ಸಂಪರ್ಕ ನೀಡಿ
ಹೊಳಲ್ಕೆರೆ ತಾಲೂಕಿನಲ್ಲಿ ಅಕ್ರಮ ಸಕ್ರಮದಲ್ಲಿ ವಿದ್ಯುತ್
ಸಂಪರ್ಕವನ್ನು, ಹಾಗೂ ತತ್ಕಾಲ್ ನಲ್ಲಿ ಅರ್ಜೆಂಟ್ ಇರುವವರಿಗೆ
ಮೊದಲು ಕೊಡಬೇಕು ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ
ಹೇಳಿದರು.
ಅವರು ಚಿತ್ರದುರ್ಗದಲ್ಲಿ ಜಿಪಂ ಸಭಾಂಗಣದಲ್ಲಿ ನೆಡೆದ
ಕೆಡಿಪಿ ತ್ರೈ ಮಾಸಿಕ ಸಭೆಯಲ್ಲಿ ಮಾತಾಡಿದರು.
ತತ್ಕಾಲ್ ನಲ್ಲಿ 5
ಕೋಟಿ ಯಷ್ಟು ಹಣವನ್ನು ಸರ್ಕಾರದಿಂದ ಕೊಡಲಾಗಿದೆ. ತತ್ಕಾಲ್
ನಲ್ಲಿ ಅಕ್ರಮ ಸಕ್ರಮದ ಫಲಾನುಭವಿಗಳಿಗೆ ಕೊಡಬೇಕು ಎಂದು
ಸೂಚಿಸಿದರು.