ಚಳ್ಳಕೆರೆ ನ್ಯೂಸ್ :
ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕರಿಗೆ ಅದ್ದೂರಿ
ಸ್ವಾಗತ
ಚಿತ್ರದುರ್ಗದ ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನಾ
ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜಿಸಿತ್ತು.
ಈ
ಕಾರ್ಯಕ್ರಮಕ್ಕೆ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಗ್ರಾಮದ
ಜನತೆ ಎತ್ತಿನ ಗಾಡಿಯಲ್ಲಿ ಅದ್ದೂರಿಯಾಗಿ ವಾದ್ಯಗಳ
ಜೊತೆಯಲ್ಲಿಕರೆದುಕೊಂಡು ಬಂದರು.
ಮೆರವಣಿಗೆಯಲ್ಲಿ
ಗ್ರಾಮದ ಮಹಿಳೆಯರು, ಪೂರ್ಣ ಕುಂಬ ಹೊತ್ತು ನಡೆದಿದ್ದು,
ವಿಶೇಷವಾಗಿತ್ತು. ಇದರ ಜೊತೆಗೆ ಗ್ರಾಮಸ್ಥರು ಪಟಾಕಿ ಸಿಡಿಸಿ
ಸಂಭ್ರಮಿಸಿದರು.