ಚಳ್ಳಕೆರೆ : ಕುಡಿಯುವ ನೀರು, ವಿದ್ಯುತ್ ವ್ಯತ್ಯಯವಾಗಿದ್ದು ನಾಲ್ಕು ದಿನಗಳಿಂದ ಗ್ರಾಮದ ಸಾರ್ವಜನಿಕರು ಹೈರಾಣಗಿದ್ದಾರೆ ಎಂದು ಮಧ್ಯ ರಾತ್ರಿ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ವಾಟ್ಸಪ್ ಸಂದೇಶವನ್ನು ರವಾನಿಸಿದ್ದ ಆಧಾರದ ಮೇಲೆ ಇಂದು

ಮುಂಜಾನೆಯೇ ತಹಶೀಲ್ದಾರ್ ಎನ್ ರಘುಮೂರ್ತಿ ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಮಕ್ಕೆ ತೆರಳಿ ತಕ್ಷಣವೇ ನಿಮ್ಮ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಹಶೀಲ್ದಾರ್ ಎನ್ .ರಘುಮೂರ್ತಿ ಹೇಳಿದ್ದಾರೆ.

ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಕ್ಕೆ ಬೇಟಿ‌ ನೀಡಿ ಭೋಗನಹಳ್ಳಿ ಗ್ರಾಮವನ್ನು ಪರಿಶೀಲಿಸಿದರು

ಕಳೆದ ಒಂದು ವಾರದ ಮಳೆ ಮತ್ತು ಗಾಳಿ ಇಂದ ಈ ಗ್ರಾಮದಲ್ಲಿ 39 ವಿದ್ಯುತ್ ಕಂಬಗಳು ಹೊರಳಿದ್ದು ಇದರಿಂದ ವಿದ್ಯುತ್ ವ್ಯತ್ಯಯವಾಗಿತ್ತು, ಕುಡಿಯುವ ನೀರು ಹಾಗೂ ವಿದ್ಯುತ್ತಿಗೆ ತೀವ್ರ ಅಭಾವ ತಲೆದೋರಿತು.

ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಮ್ಮರಾಜು ಮತ್ತು ಕುಡಿಯುವ ನೀರಿನ ಸಹಾಯಕ ಕಾರ್ಯಪಾಲಕ ಅಭಿಯಂತರರು ದಯಾನಂದ ಸ್ವಾಮಿ ಇವರೊಂದಿಗೆ ಪರಿಶೀಲಿಸಿ ತಕ್ಷಣ ದುರಸ್ತಿ ಕಾರ್ಯ ಪ್ರಾರಂಭಿಸಲಾಯಿತು

ಇಂದು ಸಂಜೆ 5 ಗಂಟೆಯೊಳಗೆ ವಿದ್ಯುತ್ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಕೆಲಸವನ್ನು ಪೂರ್ಣಗೊಳಿಸುವುದಾಗಿ ಸದರಿ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದರು

ಸ್ಥಳೀಯ ಪಿಡಿಒ ಮತ್ತು ಶಾಲಾ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಮತ್ತು ಹೋಗುವುದಿಲ್ಲವೆಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು ಸ್ಥಳದಲ್ಲಿ ಹಾಜರಿದ್ದ ತಾಲೂಕ ಪಂಚಾಯತಿಯ ಸಹಾಯಕ ನಿರ್ದೇಶಕ ಸಂತೋಷ್ ಅವರಿಗೆ ಸೂಚನೆ ನೀಡಿದ ತಹಶೀಲ್ದಾರ್, ಪಿಡಿಓ ಅನ್ನು ಬೇರೆ ಕಡೆಗೆ ವರ್ಗಾಯಿಸಿ, ಗೌರಸಮುದ್ರ ಪಿಡಿಒ ರವರಿಗೆ ದೇವರೆಡ್ಡಿ ಪಂಚಾಯಿತಿಯ ಪ್ರಭಾರವನ್ನು ವಹಿಸಿ ಸಾರ್ವಜನಿಕ ಜನಜೀವನಕ್ಕೆ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲು ಸೂಚಿಸಿದರು.

ಹಾಗೆಯೇ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7ಹಳ್ಳಿಗಳನ್ನು ಮುಂದಿನ 15 ದಿನಗಳ ಒಳಗಾಗಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿ ಈ ಗ್ರಾಮಗಳಲ್ಲಿ ಪೌತಿಖಾತೆ, ಪಿಂಚಣಿ, ಪೋಡಿ, ನಿವೇಶನ ಜಮೀನು ದಾರಿ ವಿವಾದ ಮತ್ತಿತರರ ಕಂದಾಯ ಇಲಾಖೆಯ ಎಲ್ಲಾ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಸಾರಿಗೆ ಸಚಿವರಿಂದ ಲೋಕಾರ್ಪಣೆ ಗೊಳಿಸುವುದಾಗಿ ಸೂಚಿಸಿದರು

ಮಕ್ಕಳನ್ನು ಮರಳಿ ಬಾ ಶಾಲೆಗೆ ಪರಿಕಲ್ಪನೆ ಅಡಿಯಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳು ಪೋಷಕರು ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳೊಂದಿಗೆ ವಿಶೇಷ ಕಾರ್ಯಕ್ರಮದಲ್ಲಿ ಕಲಾ ತಂಡದೊಂದಿಗೆ ಮತ್ತು ಎತ್ತಿನಗಾಡಿಯೊಂದಿಗೆ ಮಕ್ಕಳನ್ನು ಶಾಲೆಗೆ ಕರೆತಂದು ಪ್ರೋತ್ಸಾಹಿಸುವ ಸಲುವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು

ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿಯ ಸಹಾಯಕ ನಿರ್ದೇಶಕ ಸಂತೋಷ್, ದೇವರೆಡ್ಡಿಹಳ್ಳಿ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯ ಭೋಗನಹಳ್ಳಿ ಪ್ರಹ್ಲಾದ್, ವೀರಪ್ಪ ಶಾಂತಮ್ಮ, ಅನುಸೂಯಮ್ಮ ಮನೋಹರ, ಉಪಾಧ್ಯಕ್ಷ ರಾಜಮ್ಮ, ರಾಜಸ್ವನಿರೀಕ್ಷಕ ರಫಿ, ಗ್ರಾಮ ಲೆಕ್ಕಾಧಿಕಾರಿ ಉಮೇಶ್ ಉಪಸ್ಥಿತರಿದ್ದರು

Namma Challakere Local News
error: Content is protected !!