ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲೂಕು ನನ್ನಿವಾಳ ಗ್ರಾಮದ ಬೊಮ್ಮದೇವರಹಟ್ಟಿ ಕಟ್ಟೆಮನೆ ಶ್ರೀ ಮುತ್ತೈಗಳ ಸ್ವಾಮಿದೇವರ ಹಸುಗಳ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಹಸುಗಳ ಗೂಡು ಹತ್ತಿರ ಹಟ್ಟಿಯ ಮುಖಂಡರುಗಳು ಹಸುಗಳ ಗೂಡು ಹತ್ತಿರ ಮಲಗುವುದು ಬೆಳಗಿನ ಜಾವ ಬ್ರಹ್ಮ ಮುಹೂರ್ತದಲ್ಲಿ ಗುರು ಹಿರಿಯರ ದಾಸಯ್ಯಗಳ ಸಮ್ಮುಖದಲ್ಲಿ ಶಂಕು ಜಾಗಟೆ ವಾದ್ಯಗಳೊಂದಿಗೆ ಪೂಜಾ ಕಾರ್ಯಕ್ರಮ ನಿರ್ವಹಿಸುವುದರ ಮೂಲಕ ಎತ್ತುಗಳನ್ನು ಮೆರೆಸುವುದು
ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಬಹುಶಃ ಆಷಾಢ ಸಮೀಪಿಸುವ ಮುಂಚೆ ಇದರ ಉದ್ದೇಶ ಇಂದಿನ ಸಂಪ್ರದಾಯದಂತೆ ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ರೋಗರುಜಿನಿ ಬರಬಾರದು
ವರ್ಷದಲ್ಲಿ ಮಳೆ ಮತ್ತು ಬೆಳೆ ಚೆನ್ನಾಗಿ ಬರಲಿ ಎಂದು ವರ್ಷಕೊಮ್ಮೆ ಆಚರಿಸುತ್ತಾರೆ
ಈ ಸಂದರ್ಭದಲ್ಲಿ ನನ್ನಿವಾಳ ಗ್ರಾಮದ ಬೊಮ್ಮದೇವರಟ್ಟಿ ಕಟ್ಟೆಮನೆಯ ದೊರೆ ಸೂರ ನಾಯಕ, ದೊರೆ ಬೈಯಣ್ಣ, ಪಂಚಾಯತಿ ಸದಸ್ಯರಾದ ಅಪ್ಪಣ್ಣ, ವಕೀಲರಾದ ದೊರೆ ನಾಗರಾಜ್, ಹಾಗೂ ಹಟ್ಟಿಗಳ ಮುಖಂಡರು ಭಾಗವಹಿಸಿದ್ದರು