ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ಉನ್ನತ ಶಿಕ್ಷಣ ಎಂಬುದು ಮರೀಚಿಕೆಯಾಗಿತ್ತು, ಆದರೆ ಇಲ್ಲಿನ ವಿದ್ಯಾರ್ಥಿಗಳು ದೂರದ ಊರುಗಳಿಗೆ ಹೋಗಿ ವ್ಯಾಸಂಗ ಮಾಡಬೇಕಿತ್ತು ಇದನ್ನು ಮನಗಂಡು ಕಳೆದ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಈಡೀ ರಾಜ್ಯದಲ್ಲಿ ಮೂರು ಇಂಜಿನಿಯರಿಂಗ್ ಕಾಲೇಜ್ ಅನುಮೋದನೆ ನೀಡಲಾಗಿತ್ತು ಅದರಲ್ಲಿ ನಮ್ಮ ಚಳ್ಳಕೆರೆ ಕಾಲೇಜು ಒಂದು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಮೆಲುಕು ಹಾಕಿದರು.
ಅವರು ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾಲೇಜ್ ಫೆಸ್ಟ್ ಡೇ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು.
ಪ್ರತಿ ಬಾರಿಯೂ ಕಾಲೇಜು ವಾರ್ಷಿಕೋತ್ಸವದ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿಭಿನ್ನವಾಗಿ ಉಪನ್ಯಾಸಕರನ್ನು ಕರೆಸಿ ಅವರಿಗೆ ಅಧ್ಯಯನದ ಒಂದು ಭಾಗವಾಗಿ ನಿಯೋಜಿಸಬೇಕು.
ನಾನು ಕೂಡ ನಿಮ್ಮ ಹಾಗೇ ಇಂಜಿನಿಯರಿಂಗ್ ವಿದ್ಯಾರ್ಥಿ, ಭವಿಷ್ಯ ರಾಜಕೀಯ ಪ್ರವೇಶಿಸಿದ ಸಂಧರ್ಭದಲ್ಲಿ ನನ್ನ ಕನಸು ಶಿಕ್ಷಣಕ್ಕೆ ಹೆಚ್ಚಿನ ಒತ್ತುನೀಡಿ ಈಭಾಗದ ಬಡ ಮಕ್ಕಳ ವಿದ್ಯಾರ್ಜನೆಗೆ ಶ್ರಮಿಸುವ ತುಡಿತ ನನ್ನಲ್ಲಿ ಇತ್ತು ಇಗೇ ಕಳೆದ ನನ್ನ ಹನ್ನೊಂದು ವರ್ಷಗಳ ಶಾಸಕ ಅವಧಿಯಲ್ಲಿ ನನ್ನ ಕ್ಷೇತ್ರದ ಬಹು ಸಂಖ್ಯೆಯ ಅನುದಾನ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದೆನೆ, ಇಂದು ಚಳ್ಳಕೆರೆಯಂತೆ ಬಯಲು ಸೀಮೆಯಲ್ಲಿ ಇಂಜಿನಿಯರಿಂಗ್ ಕಾಲೇಜ್, ಜಿಟಿಟಿಸಿ ಕೇಂದ್ರ, ಸರಕಾರಿ ಕಾಲೇಜು ಕಟ್ಟಡ, ಶಾಲಾ ಕಟ್ಟಡಗಳು ಈಗೇ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿವೆ.
ಆದ್ದರಿಂದ ಇಲ್ಲಿ ಆಯ್ಕೆಯಾಗಿ ನಿಯೋಜಿನೆಗೊಂಡ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮೂಲಕ ವ್ಯಾಸಂಗದ ಜೊತೆಗೆ ಜೀವನದ ಮೌಲ್ಯಗಳನ್ನು ರೂಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ನಗರಸಭೆ ಸದಸ್ಯರಾದ ರಮೇಶ್ ಗೌಡ, ನಾಮ ನಿರ್ದೇಶನ ಸದಸ್ಯರಾದ ಬಡಗಿ ಪಾಪಣ್ಣ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.