ಚಳ್ಳಕೆರೆ : ಗ್ರಾಮದಲ್ಲಿ 370 ಮನೆಗಳಿದ್ದು ಸರ್ಕಾರದಿಂದ ಅವಕಾಶ ವಂಚಿತರಾಗಿದ್ದು ಸೌಲಭ್ಯ ಕಲ್ಪಿಸಬೇಕಾಗಿದೆ ಎಂದು ಸಾರ್ವಜನಿಕರ ಮನವಿ ಆಧಾರದ ಮೇಲೆ ಇಂದು ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ಗ್ರಾಮಕ್ಕೆ ಬೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿದ್ದಾರೆ.
ಚಳ್ಳಕೆರೆ ತಾಲೂಕಿನ ಆಂಧ್ರದ ಗಡಿ ಗ್ರಾಮವಾದ ದೇವರಹಳ್ಳಿ ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ
ಹಾಲಿ ನಿರ್ಮಾಣಗೊಂಡಿರುವ ಗ್ರಾಮದ ಸರ್ವೇ ನಂಬರ್ 1ಹಾಗೂ 7 ರಲ್ಲಿ ಇದ್ದು ಇದುವರೆವಿಗೂ ಪಂಚಾಯಿತಿಯಿಂದ ಅಸೆಸ್ಮೆಂಟ್ ನಂಬರ್ ನಿಗದಿಯಾಗಿಲ್ಲ,
13 ಎಕರೆ ಜಮೀನನ್ನು ತಕ್ಷಣ ಪಂಚಾಯಿತಿಗೆ ಹಸ್ತಾಂತರಿಸಲು ಪ್ರಸ್ತಾವನೆಯನ್ನು ತಕ್ಷಣ ಸಲ್ಲಿಸುವಂತೆ ರಾಜಸ್ವ ನೀರಕ್ಷಕರಿಗೆ, ಹಾಗೂ ಗ್ರಾಮ ಲೆಕ್ಕಿಕಗರಿಗೆ ಸೂಚಿಸಿದರು.
ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚಿನ ವೃದ್ಧರು ಮಹಿಳೆಯರು ಇದ್ದು ತಕ್ಷಣ ಪರಿಶೀಲಿಸಿ ಇವರುಗಳಿಗೆ ನಿಯಮಾವಳಿಯಂತೆ ವಿವಿಧ ವೇತನಗಳಿಗೆ ಸಂಬಂಧಿಸಿದ ಪ್ರಸ್ತಾವನೆಯ ಕುರಿತಂತೆ ಮನವಿ ಸ್ವೀಕರಿಸುವಂತೆ ಗ್ರಾಮ ಲೆಕ್ಕಾಧಿಕಾರಿ ಉಮೇಶ್ ತಿಳಿಸಿದರು.
ಈದೇ ಸಂದರ್ಭದಲ್ಲಿ ಗ್ರಾಮ್ ಪಂಚಾಯ್ತಿ ಸದಸ್ಯ ಮಾರಣ್ಣ ಮತ್ತಿತರು ಉಪಸ್ಥಿತರಿದ್ದರು