.
ಚಳ್ಳಕೆರೆ : ‌ಬೆಸಿಗೆ ರಜೆಯಿಂದ ಮರಳಿ ಶಾಲಾ‌ ಪರಿಸರಕ್ಕೆ ಬರುವ ಮಕ್ಕಳಿಗೆ ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗಾರಮಾಡಿ ಮಕ್ಕಳಿಗೆ ಸ್ವಾಗತ ನೀಡಿ‌ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಕರೆ ನೀಡಿದ್ದಾರೆ.

ಚಳ್ಳಕೆರೆ ನಗರದ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಶಾಲೆಯ ಕೊಠಡಿಗಳು, ಆವರಣ, ಅಡುಗೆ ಕೋಣೆ,ಕುಡಿಯುವ ನೀರಿನ ತೊಟ್ಟಿ,ಶೌಚಲಯಗಳನ್ನು ಸ್ವಚ್ಚಗೊಳಿಸಿಕೊಂಡು ಶಾಲೆಯನ್ನು ಶೃಂಗಾರ ಮಾಡಿ ಮಕ್ಕಳನ್ನು ಸಿಹಿ ನೀಡುವುದರ ಮೂಲಕ ಸ್ವಾಗತಿಸಬೇಕೆಂದು ಹೇಳಿದರು.

ತಾಲ್ಲೂಕಿನಾದ್ಯಾಂತ ನಾಳೆ ಎಲ್ಲಾ ಶಿಕ್ಷಕರು ಸಹ ಜನಪ್ರತಿನಿಧಿಗಳ, ಪೋಷಕರ ಸಹಕಾರ ಪಡೆದು ಶ್ರಮಧಾನ ಮಾಡುವುದರ ಮೂಲಕ ಶಾಲೆಗಳನ್ನು ಸ್ವಚ್ಚಗೊಳಿಸಿ,ಶೃಂಗಾರ ಮಾಡಿ ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವ ಮಾಡಬೇಕೆಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತೇಶ ಮಾತನಾಡಿ ಜಿಲ್ಲೆಯ ಎಲ್ಲಾ ಶಿಕ್ಷಕರು ಸಹ ಶಾಲಾ ಪ್ರಾರಂಭೋತ್ಸವ ಮಾಡಿ ಮಕ್ಕಳಿಗೆ ಕೋವಿಡ್ ಕಾರಣದಿಂದ ಉಂಟಾಗಿರುವ ಕಲಿಕಾ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆ ಉಪಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರ ಮೂಲಕ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಂತೆ ಕರೆ ನೀಡಿದರು

ಶಾಲಾ ಸ್ವಚ್ಚತಾ ಆಂದೋಲನದಲ್ಲಿ
SDMC ಅದ್ಯಕ್ಷೆ ಕವಿತ, ಮುಖ್ಯ ಶಿಕ್ಷಕರಾದ ಪದ್ಮಾವತಿ,
ಶಿಕ್ಷಕ ತಿಪ್ಪೇಸ್ವಾಮಿ, ಲೋಕೇಶ, ಮೋಹಿನಿ,ಮೀರಾ,
ಬೋಜರಾಜಮ್ಮ,
ಉಮಾದೇವಿ ಮತ್ತು ಪೋಷಕರ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!