ಚಳ್ಳಕೆರೆ ನ್ಯೂಸ್ :
ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು
ಹಿರಿಯೂರಿ ಬ್ಯಾಡರಹಳ್ಳಿ ಸಮೀಪದ ರಂಗಪ್ಪ ಡಾಬಾ ಬಳಿ
ಬೈಕ್ ಮತ್ತು ಕಾರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ
ಮೃತಪಟ್ಟಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ
ನಡೆದಿದೆ.
ಮೃತನನ್ನು ಬೇತೂರು ಗ್ರಾಮದ ಮಹಂತೇಶ್ ಎಂದು
ಗುರುತಿಸಲಾಗಿದೆ.
ಗಾಯಾಳು ಜಯಲಕ್ಷ್ಮಿಯನ್ನು ಜಿಲ್ಲಾ ಆಸ್ಪತ್ರೆಗೆ
ರವಾನಿಸಲಾಗಿದೆ. ಇಬ್ಬರು ಹಿರಿಯೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆದು, ಮರಳಿ ಬೇತೂರಿಗೆ ತೆರಳುತ್ತಿದ್ದ ವೇಳೆ ಅಪರಿಚಿತ
ಕಾರು ಡಿಕ್ಕಿ ಹೊಡೆದಿದೆ.
ಅಬ್ಬಿನಹೊಳೆ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.