ಗಬ್ಬೆದ್ದು ನಾರುತ್ತಿರುವ ಕೆರೆಯ ನೀರು ಮೀನುಗಳ ಮರಣ ಹೋಮ.
ಚಳ್ಳಕೆರೆ: ನಗರ ಸಮೀಪ ಇರುವ ನಗರಂಗೆರೆ ಗ್ರಾಮದ ಕೆರೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ.
ಸುಮಾರು 75 ಸಾವಿರ ಜನಸಂಖ್ಯೆ ಇರುವ ಚಳ್ಳಕೆರೆ ನಗರದ 31 ವಾರ್ಡುಗಳ ನಡುವಿನ ಚರಂಡಿ ಮತ್ತು ರಾಜಕಾಲುವೆಗಳಲ್ಲಿ ಹರಿಯುವ ಕೊಳಚೆ ಮತ್ತು ಮಳೆಯ ನೀರಿಗೆ ನಗರಂಗೆರೆ ಕೆರೆ ನಿಲುಗಡೆ ತಾಣವಾಗಿದೆ.
ಇಲ್ಲಿನ ಕಾರ್ಖಾನೆಗಳಿಂದ ಕೆರೆ ಸೇರಿರುವ ಕಲುಷಿತ ನೀರಿಗೆ ಕೆರೆಯ ನೀರು ದುರ್ವಾಸನೆ ಇದೆ. ಕೆರೆಯಲ್ಲಿ ಸಾವಿರಾರು ಮೀನುಗಳು ಸೇರಿದಂತೆ ಜಲಚರ ಜೀವಿಗಳು ಜೀವ ಕಳೆದುಕೊಂಡಿವೆ.
ಎಚ್ಚೆತ್ತುಕೊಂಡ ಗ್ರಾಮಸ್ಥರು ಕೈಗೆ ಬ್ಲೌಜ್, ಮಾಸ್ಕ್ ಕಟ್ಟಿಕೊಂಡು ಟನ್‌ಗಟ್ಟಲೆ ಸತ್ತ ಮೀನುಗಳನ್ನು ಗುಂಡಿತೋಡಿ ಮಣ್ಣು ಹಾಕಿದ್ದಾರೆ. ಕಲುಷಿತ ನೀರಿನಿಂದ ಗ್ರಾಮಸ್ಥರಿಗೂ ರೋಗ ಹರಡುವ ಭೀತಿ ಇದೆ. ಇನ್ನಾದರೂ ಸಂಬAಧಪಟ್ಟ ಅಧಿಕಾರಿಗಳು ಕೆರೆಗೆ ಸೇರುವ ಚರಂಡಿ ನೀರಿಗೆ ಶುದ್ದೀಕರಣ ಘಟಕಗಳನ್ನು ಸ್ಥಾಪಿಸಬೇಕು ಎನ್ನುತ್ತಾರೆ ಗ್ರಾಪಂ ಮಾಜಿ ಅಧ್ಯಕ್ಷ ಕೆ. ಕುಮಾರಸ್ವಾಮಿ,
ನಗರಂಗೆರೆ ಗ್ರಾಮದ ಕೆರೆಯ ಅಂಗಳ 90.08 ಹೆಕ್ಟರ್ ವಿಸ್ತೀರ್ಣವಿದೆ. 51.08 ಎಂಸಿಎಫ್‌ಟಿ ಪ್ರಮಾಣದ ನೀರು ನಿಲ್ಲುವ ಸಾಮರ್ಥ್ಯ ಇರುವ ಕೆರೆ ಇದಾಗಿದೆ. 72.21 ಹೆಕ್ಟರ್ ಕೆರೆ ನೀರಿನ ಅವಲಂಬಿತ ಅಚ್ಚುಕಟ್ಟು ಪ್ರದೇಶವಿದೆ. ಸುಮಾರು 730 ಮೀಟರ್ ಉದ್ದ ಕೆರೆ ಏರಿ ಇದೆ.
2ತೂಬುಗಳಿದ್ದು, ಕೆರೆಗೆ ನೀರು ಸೇರಿಕೊಳ್ಳುವ ಎರಡು ಪ್ರಧಾನ ಕಾಲುವೆಗಳಿವೆ. ಚಳ್ಳಕೆರೆ ನಗರದ ಹೊರವಲಯ ಅಜ್ಜನಗುಡಿ ಕೆರೆ ತುಂಬಿ ಕೋಡಿ ಬಿದ್ದ ನೀರು ರಹೀಂ ನಗರ, ಕಾಟಪ್ಪನಹಟ್ಟಿ, ಹಳೆಟೌನ್ ಮಾರ್ಗವಾಗಿ ನಗರಂಗೆರೆ ಕೆರೆಗೆ ಹರಿದು ಬರುತ್ತವೆ.
ಇಂತಹ ಕೆರೆಯಲ್ಲಿ ಈಗ ನೀರು ಕಲುಷಿತಗೊಂಡಿದ್ದು ಮೀನುಗಳ ಮರಣ ಹೋಮ ನಡೆದಿದೆ. ಇನ್ನಾದರೂ ಸಂಬAಧಪಟ್ಟ ಅಧಿಕಾರಿಗಳು ಜಲಚರ ಪ್ರಾಣಿಗಳ ಮಾರಣಹೋಮ ತಪ್ಪಿಸುವರೆ ಕಾದುನೋಡಬೇಕಾಗಿದೆ