ಬರಗಾಲದಿಂದ ಕಂಗಾಲಾಗಿದ್ದ ಜನತೆಗೆ ಭರವಸೆ ತುಂಬಿದ ಮಳೆರಾಯ…

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಳೆಯ ಕೊರತೆಯಿಂದಾಗಿ ತೀವ್ರ ಬರಗಾಲ ಸೃಷ್ಟಿಯಾಗಿ ..ಜನ ಜಾನುವಾರಗಳು ಬದುಕುವುದೇ ದುಸ್ತರವಾಗಿತ್ತು..ಇಂತಹ ಸಂದರ್ಭದಲ್ಲಿ ಕಳೆದ 2 ವಾರಗಳಲ್ಲಿ ತಾಲೂಕಿನಾದ್ಯಂತ ದಾಖಲೆಯ ಮಳೆ ಸುರಿದಿದ್ದು..ಬದುಕುವ ಭರವಸೆ ಕಳೆದುಕೊಂಡಿದ್ದ ಜನತೆಯ ಬದುಕಿಗೆ ಭರವಸೆ ತುಂಬಿದೆ…

ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಶಾಸಕರಾದ ಶ್ರೀ ಯುತ .ಎನ್ .ವೈ.ಗೋಪಾಲ ಕೃಷ್ಣ ರವರು….

ಕಳೆದ 2 ವಾರಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು.. ಹಲವಾರು ಹಳ್ಳ ಕೊಳ್ಳಗಳು ಹರಿದು ಕೆರೆಗಳು ಭಾಗಶಃ ತುಂಬಿ..ರೈತರಿಗೆ ತುಂಬಾ ಸಂತಸ ತಂದಿದೆ.. ಅಲ್ಲದೆ ಈ ಮಳೆಯ ಅವಾಂತರದಿಂದ ಹಲವು ಗ್ರಾಮಗಳ ಮನೆಗಳು..ಶಾಲೆಗಳು ಜಲಾವೃತವಾಗಿವೆ..ಕೆಲವು ಹೊಲಗಳ ಬೆಲೆಗಳು ಭಾಗಶಃ ಹಾನಿಯಾಗಿವೆ..ಕೆಲವು ಕಡೆ ವಿದ್ಯುತ್ ಕಂಬಗಳು ಬಿದ್ದು ಸಂಪರ್ಕ ಕಡಿತಗೊಂಡಿದೆ..ಕೆಲವು ರಸ್ತೆಗಳು ಕೊಚ್ಚಿಕೊಂಡು ಹೋಗಿವೆ..ಕೆಲವು ಜಾನುವಾರು ಗಳು ಸಿಡಿಲಿಗೆ ಬಲಿಯಾಗಿವೆ.ಈಗೆ ಹತ್ತು ಹಲವು ಸಮಸ್ಯೆಗಳು ಉದ್ಭವಿಸಿವೆ.. ಈ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಆಯಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಅದರಂತೆ ಅವರು ಕಾರ್ಯ ಸನ್ನಾದ್ದರ್ರಾಗಿದ್ದರೆ..

ಅಲ್ಲದೇ ಇದೆಲ್ಲದಕಿಂತ ಹೆಚ್ಚಾಗಿ ತಾಲ್ಲೂಕಿನಲ್ಲಿ ಬಿದ್ದ ಮಳೆ ನೀರು ವ್ಯರ್ಥವಾಗಿ ಹರಿದು ಆಂಧ್ರಪ್ರದೇಶ ಮತ್ತು ಇತರೆ ಜಿಲ್ಲೆಗಳಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ …ಇದನ್ನು ನಾನು ಮನಗೊಂಡು ತಾಲ್ಲೂಕಿನ ಒಂದು ಹನಿ ನೀರು ಸಹ ವ್ಯರ್ಥವಾಗಿ ಬೇರೆ ಕಡೆ ಹರಿದು ಹೋಗದಂತೆ ಹಲವಾರು ಯೋಜನೆಗಳನ್ನು ರೂಪಿಸಿದ್ದೆನೆ..ನೀತಿ ಸಂಹಿತೆ ಇದ್ದಿದ್ದರಿಂದ ಅದನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ..ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಾಂತ ಪ್ರವಾಸ ಕೈಗೊಂಡು ಅವಶ್ಯಕತೆ ಇರುವ ಕಡೆ ಕುದ್ದು ಬೇಟಿ ನೀಡಿ ಸಮಸ್ಯೆ ಅವಲೋಕಿಸಿ ಸುಕ್ತ ಪರಿಹಾರ ನೀಡಲಾಗುವುದು ಎಂದರು…

Namma Challakere Local News
error: Content is protected !!