ಚಳ್ಳಕೆರೆ ನ್ಯೂಸ್ :

ಅಧಿಕಾರಿಗಳ ನಿರ್ಲಕ್ಷ್ಯ ವೋ , ಅಸಡ್ಡೆ ಮನೋಭಾವ ನೆಯೋ ಗೊತ್ತಿಲ್ಲ ಕಳೆದ ಹಲವಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ಅಳವಡಿಸಿದ ವಿದ್ಯುತ್ ಕಂಬಗಳು ಗಾಳಿ ಮಳೆಗೆ ಮುರಿದು ಬಿದ್ದರು ಎಚ್ಚೆತ್ತುಕೊಳ್ಳಾಬೇಕಾದ ಇಲಾಖೆ ಮೌನ ವಹಿಸಿದೆ.

ಹೌದು
ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ಕೆರೆಯಲ್ಲಿ ಕುಡಿಯುವ ನೀರಿಗಾಗಿ ಬೋರು ಕೊರಿಸಲಾಗಿತ್ತು. ವಿದ್ಯುತ್ ಸಂಪರ್ಕಕ್ಕಾಗಿ ಸು. 25ಕೆವಿ ನಿರಂತರ ವಿದ್ಯುತ್ ಪೆಟ್ಟಿಗೆಯನ್ನು ಅಳವಡಿಸಲಾಗಿದೆ,

2017-2018 ಸಾಲಿನಲ್ಲಿ ಬರಗಾಲದ ಪರಿಸ್ಥಿತಿಯಲ್ಲಿ 3 ಇಂಚು ಬಂದಿತ್ತು. ಇಡೀ ಗ್ರಾಮಕ್ಕೆ ಇದು ಕೊಳವೆ ಬೋರ್ ನಲ್ಲಿ ಕುಡಿಯುವ ನೀರು ಕೊಟ್ಟು ಜೀವ ಉಳಿಸಿತ್ತು

ಆದರೆ
ಇವತ್ತಿನ ಪರಿಸ್ಥಿತಿಯಲ್ಲಿ 4 ಕಂಬ ಪೆಟ್ಟಿಗೆ ನೆಲಕ್ಕೆ ಉರುಳಿ ಬಿದ್ದಿವೆ, ಒಂದು ವರ್ಷವಾದರೂ ಇತ್ತ ಕಡೆ ಬೆಸ್ಕಾಂ ಅಧಿಕಾರಿಗಳಾಗಲಿ ಸಂಬಂಧಪಟ್ಟವರು ಗಮನಹರಿಸದಿರುವುದು ಖಂಡನೀಯ…

ಇನ್ನೂ ಇದೇ ಕೆರೆಯಲ್ಲಿ ಪ್ರತಿದಿ‌ನ ಸಾವಿರಾರು ಕುರಿ ದನ ಎಮ್ಮೆ ಸಾರ್ವಜನಿಕರು ನೀರಿಗಾಗಿ ಮತ್ತು ಮೇವಿಗಾಗಿ ದಿನಾಲು ಓಡಾಡುವಂಥ ಸ್ಥಳ , ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಸಮಸ್ಯೆಯನ್ನು ಸರಿಪಡಿಸಬೇಕಾಗಿ ಸಾರ್ವಜನಿಕರು ಇಲಾಖೆಗೆ ಮನವಿ ಮಾಡಿದ್ದಾರೆ.

About The Author

Namma Challakere Local News
error: Content is protected !!