ನಮ್ಮ ಚಳ್ಳಕೆರೆ ಫಲಶೃತಿ
ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದೇವತೆಯಾದ ಶ್ರೀ ಮಾರಮ್ಮ ದೇವಿಗೆ ಹೋಗುವ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಪಾಳುಬಿದ್ದ ಬಾವಿಯಿಂದಾಗಿ ವಾಹನ ಸಾವರರಿಗೆ ಸಂಕಷ್ಟ ಎಂಬ ತಲೆಬರಹದಡಿಯಲ್ಲಿ ನಮ್ಮ ಚಳ್ಳಕೆರೆ ಟಿವಿ ಸುದ್ದಿ ಪ್ರಕಟಿಸಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಪಾಳು ಬಿದ್ದ ಬಾವಿ ಮುಚ್ಚಲು ಅಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೊಳಕಾಲ್ಮೂರು ಮಾರ್ಗವಾಗಿ
ಆಂದ್ರಪ್ರದೇಶ ಸುತ್ತಲಿನ ಪ್ರದೇಶದಲ್ಲಿ ಆಗಮಿಸುವ ಭಕ್ತಾಧಿಗಳು ಈದೇ ಮಾರ್ಗವಾಗಿ ಸಂಚರಿಸಬೇಕು ಆದರೆ ತಿರುವಿನಲ್ಲಿ ಈ ಪಾಳುಬಿದ್ದ
ಬಾವಿ ಇರುವುದರಿಂದ ಅಪಾಯ ಕಟ್ಟಿಬುತ್ತಿ ಇದರಿಂದ ಅಪಘಾತ ತಪ್ಪಿಸಲು ಜಿಲ್ಲಾಡಳಿತ ಕ್ರಮಕ್ಕೆ ಹಾಗೂ ಸುದ್ದಿ ಬಿತ್ತರಿಸಿದ ನಮ್ಮ ಚಳ್ಳಕೆರೆ ಟಿವಿಗೆ ಸಾರ್ವಜನಿಕರು, ಹಾಗೂ ವಾಹನ ಸಾವರರು ಧನ್ಯವಾದಗಳು ಅರ್ಪಿಸಿದ್ದಾರೆ.
ಈ ರಸ್ತೆಯು ಪಕ್ಕ ತಡೆಗೋಡೆ ಇಲ್ಲದೆ ಕುಸಿಯುತ್ತಿರುವುದು ಅಪಾಯದ ಬಗ್ಗೆ ಸುದ್ದಿಯನ್ನು ಪ್ರಕಟ ಮಾಡಿದ್ದು
ಈ ಸುದ್ದಿಯು ಜಿಲ್ಲಾಡಳಿತಕ್ಕೆ ಗಮನಕ್ಕೆ ಬಂದಿದ್ದು ಅತಿ ತುರ್ತಾಗಿ ಅಧಿಕಾರಿಗಳಿಗೆ ಬಾವಿಯನ್ನು ಮುಚ್ಚಲು ಆದೇಶ ಮಾಡಿದ್ದರಿಂದ ಭಾವಿಯ ಹತ್ತಿರ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿ ಅತೀ ತುರ್ತಾಗಿ ಭಾವಿಯನ್ನು ಮುಚ್ಚಲು ಕೆಲಸ ಪ್ರಾರಂಭ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರಾದ ಶಶಿಕುಮಾರ್ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.