ಚಳ್ಳಕೆರೆ ನ್ಯೂಸ್ : ಕಛೇರಿಯಲ್ಲಿ ಇರುವಷ್ಟು ದಿನಗಳ ಕಾಲ ಸಹಪಾಠಿಗಳೊಂದಿಗೆ ಉತ್ತಮ ಒಡನಾಟ ಹೊಂದಿ ಇಂದು ವಯೋನಿವೃತ್ತಿಯಾಗುತ್ತಿರುವುದು ಸಂತಸಕರ ವಿಷಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.

ಅವರು ನಗರದ ಕ್ಷೇತ್ರ ಶಿಕ್ಷಣಾಧಿಕಾರಗಳ ಕಛೇರಿಯಲ್ಲಿ ಕಳೆದ ಹಲವು ದಿನಗಳಿಂದ ಕಛೇರಿ ಅಧಿಕ್ಷಕರಾದ ಕಾರ್ಯನಿರ್ವಹಿಸಿದ ಧನಂಜಯಪ್ಪ, ಹಾಗೂ ಬೇರೆಡೆಗೆ ಜಿಲ್ಲೆಗೆ ಪದನ್ನೋತ್ತಿ ಹೊಂದಿರುವ ಹೇಂಜರಪ್ಪ ರವರಿಗೆ ಬಿಳ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು

ಇನ್ನೂ ರಾಜಣ್ಣ ಮಾತನಾಡಿ, ಕಛೇರಿಯಲ್ಲಿ ಇರುವಷ್ಟು ದಿನಗಳ ಕಾಲ ಪ್ರೀತಿ ವಿಶ್ವಾಸ ದಿಂದ ಎಲ್ಲಾರ ಸ್ನೇಹ ಗಳಿಸಿದ ಸಾದಾರಣ ವ್ಯಕ್ತಿ ಎಂದರೆ ಅದು ಧನಂಜಯ ಒಬ್ಬರು 1987 ರಿಂದ ನಾವು ಶಿಕ್ಷಕರ ಸಮಸ್ಯೆಗಳ ಬಗ್ಗೆ ಪರಿಹಾರ ನೀಡುವುದರ ಮೂಲಕ ಹುದ್ದೆ ಎಂಬ ಅಹಾಂಕಾರ ತೋರದೆ ಪ್ರೀತಿ ವಿಶ್ವಾಸಕ್ಕೆ ಹೆಸರುವಾಸಿಯಾಗಿದ್ದರು‌ ಎಂದರು.

ಇದೇ ಸಂಧರ್ಭದಲ್ಲಿ ಕಛೇರಿ ಸಿಬ್ಬಂದಿ ಸಿದ್ದೇಶ್ವರ, ಸುರೇಶ್ ಮಾತನಾಡಿದರು.

ಇದೇ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್, ಹೇಂಜರಪ್ಪ, ಮಹಾಲಿಂಗಪ್ಪ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಕಾರ್ಯದರ್ಶಿ ಡಿಎಸ್.ಪಾಲಯ್ಯ, ಕಛೇರಿ ವ್ಯವಸ್ಥಾಪಕ ಸಿದ್ದೇಶ್ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ, ಅನುದಾನ ಶಾಲಾ ಶಿಕ್ಷಕರ ಸುರೇಶ್, ದೈಹಿಕ ಪರೀವಿಕ್ಷ ಸುನೀಲ್ ನಾಯ್ಜ್, ರಾಜ್ಯ ಪರಿಷತ್ ಸದಸ್ಯ ಸಣ್ಣ ಸೂರಮ್ಮ, ಪುರುಷೋತ್ತಮ, ರಾಜಣ್ಣ, ಮಹಂತೇಶ್, ಸುರೇಶ್, ಈರಸ್ವಾಮಿ, ಇತರರು ಭಾಗವಹಿಸಿದ್ದರು ‌

About The Author

Namma Challakere Local News
error: Content is protected !!