ನೇರಲಗುಂಟೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ
ನೇರಲಗುಂಟೆ ಗ್ರಾ.ಪಂ.ಅಧ್ಯಕ್ಷರಾಗಿ ಎಂ.ಸುಷ್ಮ ಸುರೇಶ್ ನಾಯಕ ಆಯ್ಕೆ.
ನಾಯಕನಹಟ್ಟಿ:: ಜೂನ್.5 ಸಮೀಪದ ನೇರಲಗುಂಟೆ ಗ್ರಾಮ ಪಂಚಾಯತಿಯಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಗ್ರಾಮ ಪಂಚಾಯತಿಯ ಒಟ್ಟು ಸದಸ್ಯರ ಸಂಖ್ಯೆ 15 . ಅಧ್ಯಕ್ಷರ ಚುನಾವಣೆಯಲ್ಲಿ ಪಿ ನಾಗವೇಣಿ ಮಂಜಣ್ಣ ನಾಮಪತ್ರವನ್ನ ಸಲ್ಲಿಸಿದರು.
ಚುನಾವಣೆಯಲ್ಲಿ ಸದಸ್ಯರ 15ರಲ್ಲಿ ಎಂ ಸುಷ್ಮಾ ಸುರೇಶ್ ನಾಯ್ಕ 8 ಮತಗಳನ್ನು ಪಡೆದರು.
ಪಿ ನಾಗವೇಣಿ ಮಂಜಣ್ಣ ಏಳು ಮತಗಳನ್ನ ಪಡೆದು ಪ್ರಭಾವಗೊಂಡರು.
ನೂತನ ಅಧ್ಯಕ್ಷರಾಗಿ ಎಂ ಸುಷ್ಮಾ ಸುರೇಶ್ ನಾಯಕ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಇಒ ಬಿ ಎಸ್ ಲಕ್ಷ್ಮಣ್ ಹೇಳಿದ್ದಾರೆ.
ಇದೇ ವೇಳೆ ಮುಖಂಡರಾದ ನೇರಲಗುಂಟೆ ಸೂರ ನಾಯಕ, ಎಂ.ರಾಮಪ್ಪ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ ತಿಪ್ಪೆಸ್ವಾಮಿ. ಭೀಮನಕೆರೆ ಪಾಲಯ್ಯ, ಎನ್ ದೇವರಹಳ್ಳಿ ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಕಾಟಯ್ಯ, ವರವು ಶಂಕರ್ ಮೂರ್ತಿ, ಕೆ ಜಿ ಪ್ರಕಾಶ್, ಎನ್ ದೇವರಹಳ್ಳಿ ಟಿ ರಾಜಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಎ.ಓ. ಗೋಪಾಲ ನಾಯಕ, ಡಿ ನಾಗಮಣಿ, ರುದ್ರಮುನಿ (ಹುಗ್ಗೆಪ್ಪ) ಚಳ್ಳಕೆರಮ್ಮ, ಆರ್ ಚಂದ್ರಶೇಖರ್, ದುರುಗಮ್ಮ, ತಿಪ್ಪೇಸ್ವಾಮಿ, ಈರಣ್ಣ, ಕರಿಯಮ್ಮ, ಟಿ. ಚನ್ನಕೇಶವ, ಶಾಂತಮ್ಮ, ದುರುಗಮ್ಮ, ಗೌರಣ್ಣ, ಗ್ರಾಮ ಪಂಚಾಯಿತಿ ಪಿಡಿಓ ಎಸ್, ಹನುಮಂತ ಕುಮಾರ್, ದ್ವಿತೀಯ ದರ್ಜೆ ಸಹಾಯಕ ಎಂ ಬಿ ವೀರನಾಯಕ, ಕಾರ್ಯದರ್ಶಿ ಜಯಣ್ಣ ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಕೆ. ಶಿವಕುಮಾರ್, ಬಿಲ್ ಕಲೆಕ್ಟರ್ ತಿಪ್ಪೇಸ್ವಾಮಿ, ಇದ್ದರು