ಚಳ್ಳಕೆರೆ
ಪರಿಸರ ಅನ್ನೋದು ಭೂಮಿಯ ಒಂದು ಮುಖ್ಯ ಅಂಗ ,ಇಂತಹ ಪರಿಸರವನ್ನು ಇತ್ತೀಚಿನ ದಿನಗಳಲ್ಲಿ ಮನುಷ್ಯ ಪರಿಸರ ನಾಶ ಮಾಡುತ್ತಿದ್ದಾನೆ, ಇದರಿಂದಾಗಿ ಮನುಷ್ಯನಿಗೆ ಆಮ್ಲಜನಕದ ಕೊರತೆ ಉಂಟಾಗುತ್ತದೆ ಎಂದು ಜೆ ಎಂ ಎಫ್ ಸಿ ಸಿವಿಲ್ ನ್ಯಾಯಾಧೀಶರಾದ ಶಮೀರ್ ಪಿ ನಂದ್ಯಾಳ್ ಹೇಳಿದರು,
ಇವರು ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಸೇವಾ ಸಮಿತಿ ಮತ್ತು ವಕೀಲರ ಸಂಘ ನಗರಸಭೆ ಮತ್ತು ಅರಣ್ಯ ಇಲಾಖೆಯ ಸಮಿತಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಕ್ಕೆ ನೀರು ಹಾಕುವ ಮೂಲಕ ಮಾತನಾಡಿದ ಇವರು ,
ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ಸ್ವಾರ್ಥಕೋಸ್ಕರ ಮರ ಗಿಡಗಳನ್ನು ಕಡಿದು ಪರಿಸರ ನಾಶ ಪಡಿಸುತ್ತಿದ್ದಾನೆ, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರು ಪರಿಸರ ಸಂರಕ್ಷಣೆ ಮಹತ್ವದಾಗಿರುತ್ತದೆ ಪರಿಸರದಿಂದ ಜಾನುವಾರುಗಳಿಗೆ ಪಕ್ಷಿಗಳಿಗೆ ಹಾರ ದೊರೆಯುತ್ತದೆ ಮನುಷ್ಯನ ಜೀವನಕ್ಕೂ ಕೂಡ ಪರಿಸರ ಬಹು ಮುಖ್ಯ ಪಾತ್ರ ವಹಿಸುತ್ತದೆ ,ಇಂತಹ ಪರಿಸರವನ್ನು ನಾಶಪಡಿಸದೆ ಹೆಚ್ಚಿನ ರೀತಿಯ ಗಿಡಮರಗಳನ್ನು ನೆಟ್ಟು ಪರಿಸರವನ್ನು ಕಾಪಾಡಬೇಕಾಗಿದೆ ಪರಿಸರದಿಂದ ಮನುಷ್ಯನಿಗೆ ಆಮ್ಲಜನಕದ ಕೊರತೆ ಇರುವುದಿಲ್ಲ ಇದರಿಂದಾಗಿ ಮನುಷ್ಯನ ಆರೋಗ್ಯವು ಕೂಡ ವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದರು
ಇನ್ನು ಈ ಸಂದರ್ಭದಲ್ಲಿ ಜೆ ಎಂ ಎಫ್ ಸಿ ವಿಲ್ ನ್ಯಾಯಾಧೀಶರಾದ ಕೆಎಂ ತೇಜಸ್ವಿನಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪರಿಸರ ಅನ್ನುವುದು ಮರೀಚಿಕೆಯಾಗಿದೆ ಮನುಷ್ಯ ತಾನು ಬದುಕಲು ಪರಿಸರವನ್ನು ಹಾಳು ಮಾಡಿ ತನ್ನ ಸ್ವಾರ್ಥಕೋಸ್ಕರ ಗಿಡಮರಗಳನ್ನು ನಾಶಪಡಿಸುತ್ತಿದ್ದಾನೆ, ಇದೇ ರೀತಿ ಮುಂದುವರಿದರೆ ನಾವು ಅಂಗಡಿಗೆ ಹೋಗಿ ರೇಶನ್ ಹೇಗೆ ತರುತ್ತೀವೋ ಅದೇ ರೀತಿಯಾಗಿ ಆಮ್ಲಜನಕವನ್ನು ಕೊಂಡುಕೊಳ್ಳ ಬೇಕಾಗುತ್ತದೆ ಈ ಪರಿಸ್ಥಿತಿ ದೂರು ಇಲ್ಲ, ಇತ್ತೀಚಿನ ದಿನಮಾನಗಳಲ್ಲಿ 38 ರಿಂದ 42 ಡಿಗ್ರಿ ಸೆಲ್ಸಿಯಸ್ ಬಿಸಿಲು ಇದ್ದು ಇಂತಹ ಬಿಸಿಲಿನಿಂದ ಮನುಷ್ಯ ಹೈರಾಣ ಆಗಿದ್ದಾನೆ, ಹಿಂದಿನ ಕಾಲದ ಜನಗಳು ಪರಿಸರ ನಾಶ ಮಾಡಿಲ್ಲ ಇತ್ತೀಚಿನ ದಿನಮಾನಗಳಲ್ಲಿ ಪರಿಸರ ನಾಶ ಮಾಡಿ ನಮ್ಮ ಜೀವನ ಕಟ್ಟಿಕೊಳ್ಳುತ್ತಿದ್ದೇವೆ. ಇದನ್ನು ಬಿಟ್ಟು ಜನಸಾಮಾನ್ಯರು ಪರಿಸರ ಪ್ರೇಮಿಯಾಗಿ ಮರ-ಗಿಡಗಳನ್ನು ಕಡಿಯದೆ ಹೆಚ್ಚಿನ ರೀತಿಯಲ್ಲಿ ಪರಿಸರ ಸಂರಕ್ಷಿಸಿದರೆ ಹೆಚ್ಚಿನ ಮಟ್ಟದಲ್ಲಿ ಮಳೆಯಾಗುವ ಸಾಧ್ಯತೆ ಇದೆ, ಸಾರ್ವಜನಿಕರು ಇದನ್ನು ಅರಿತು ಪರಿಸರ ಬೆಳೆಸಿ ಪರಿಸರ ಉಳಿಸಿ ಎಂಬ ಸಿದ್ಧಾಂತದಂತೆ ಪರಿಸರ ಕಾಪಾಡುವದೇ ನಮ್ಮ ದಯೆ ಎಂದು ತಿಳಿದುಕೊಂಡು ಪರಿಸರ ಸಂರಕ್ಷಿಸಿ ಎಂದು ತಿಳಿಸಿದರು
ಇನ್ನು ಈ ವೇಳೆ ವಲಯ ಅರಣ್ಯ ಅಧಿಕಾರಿ ಬಹುಗುಣ, ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ, ವಕೀಲರ ಸಂಘದ ಅಧ್ಯಕ್ಷ ನಾಗರಾಜ್, ವಲಯ ಅರಣ್ಯ ಅಧಿಕಾರಿ ನಿತಿನ್, ಮಾತನಾಡಿದರು ,
ಇನ್ನು ಈ ಸಂದರ್ಭದಲ್ಲಿ ವಕೀಲರು ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಶಶಿಕಲಾ ಸಿ ಮಂಜುನಾಥ್ ಟೀ ರುದ್ರಯ್ಯ ಸೇರಿದಂತೆ ಅನೇಕ ವಕೀಲರು ಅರಣ್ಯ ಅಧಿಕಾರಿಗಳು ಹಾಜರಿದ್ದರು