ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲೂಕಿನ ರಂಗವನಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಕರು ಮಕ್ಕಳಿಂದ ಅದ್ದೂರಿಯಾಗಿ ಪತ ಸಂಚಲನ ನಡೆಸಿದರು.
ಇನ್ನೂ ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು ಮಕ್ಕಳಿಗೆ ಪ್ರಾರಂಭದಲ್ಲಿ ಪೆನ್ನು ಹೂವು ಕೊಡುವುದರ ಮುಖಾಂತರ ಶಾಲೆಗೆ ಸ್ವಾಗತಿಸಿದ ಅವರು ಎಲ್ಲಾ ಮಕ್ಕಳನ್ನು ಶಾಲೆಯ ಒಳಗಡೆ ಬರಮಾಡಿಕೊಂಡರು
ನಂತರ ಮಕ್ಕಳಿಗೆ ರಜೆಯ ಸಂಭ್ರಮದ ದಿನಚರಿ ಕೇಳುವ ಮೂಲಕ ಮಕ್ಕಳ ಮನಸ್ಸನ್ನು ಸೇಳೆದರು.
ಇನ್ನೂ ಅನೇಕ ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಮಕ್ಕಳಿಗೆ ಉತ್ತಮ ಗುರುಗಳಾಗಿ ವಯೋ ನಿವೃತ್ತಿ ಪಡೆದ ಶಾಲೆಯ ಹಿರಿಯ ಶಿಕ್ಷಕರಾದ ಸರಳ ರವರು
ನಿವೃತ್ತಿ ಆದ್ದರಿಂದ ಶಾಲೆಯ ಎಲ್ಲಾ ಶಿಕ್ಷಕರು ಸಿಬ್ಬಂದಿ ವರ್ಗದವರು ಮಕ್ಕಳು ಸೇರಿದಂತೆ ಸರಳ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಸಿಹಿ ಊಟದೊಂದಿಗೆ ವಿದ್ಯಾರ್ಥಿಗಳು ಬೀಳ್ಕೊಟ್ಟರು
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಹೊನ್ನೇಶಪ್ಪ, ಟಿ ಶಾರದಮ್ಮ, ಸರಳಮ್ಮ, ಜಿ. ವಿಜಯಲಕ್ಷ್ಮಿ, ಶಿವಲಿಂಗಪ್ಪ ,ಮತ್ತು ಭವ್ಯ, ಹಾಗೂ ಎಸ್ ಡಿಎಂಸಿ ಪದಾಧಿಕಾರಿಗಳು ಮಕ್ಕಳು ಹಾಜರಿದ್ದರು.