ಚಳ್ಳಕೆರೆ ನ್ಯೂಸ್ : ಆಂದ್ರದ ಗಡಿಯನ್ನು ಹಂಚಿಕೊAಡ ಚಳ್ಳಕೆರೆ ತಾಲೂಕಿನಲ್ಲಿ ಕಳ್ಳರ ಹಾವಳಿ ಎಚ್ಚಾಗಿದೆ, ಹಾಡ ಹಗಲೆ ಕಳ್ಳತನ ಪ್ರಕರಣಗಳು ಜರುಗುತ್ತಿರುವುದು ಪೋಲಿಸರಿಗೆ ತಲೆನೋವಾಗಿದೆ.
ಹೌದು ಚಳ್ಳಕೆರೆ ಟೌನ್ ಪಾವಗಡ ರಸ್ತೆ ಜಯರಾಮ ಟಾಕೀಸ್ ಪಕ್ಕ ಮಹಡಿ ನೀಲಾದ್ರಿ ಸ್ಟುಡಿಯೋದಲ್ಲಿ ಅಂಗಡಿ ಮಾಲೀಕರು ಮನೆಗೆ ಮಧ್ಯಾಹ್ನ ಊಟಕ್ಕೆ ಹೋಗುವ ಸಂದರ್ಭದಲ್ಲಿ ಗ್ಲಾಸ್ ಡೋರ್ ಲಾಕ್ ಮಾಡಿಕೊಂಡು ಹೋಗಿರುತ್ತಾರೆ
ಇದನ್ನ ಕಂಡ ಕಳ್ಳರು ಒಳಗಡೆ ಪ್ರವೇಶಿಸಿ ಒಂದು ಫೋಟೋ ಕ್ಯಾಮೆರಾ ಮತ್ತು ಕ್ಯಾಶ್ ಡ್ರಾ ದಲ್ಲಿರುವ 6000 ಹಣವನ್ನು ದೋಚಿದ್ದಾರೆ ಮಧ್ಯಾಹ್ನ 2:30 ಸುಮಾರಿಗೆ ಈ ಘಟನೆ ಜರುಗಿದೆ.
ಇನ್ನೂ ಹಗಲ ವೇಳೆಯಲ್ಲಿ ಈ ಪ್ರಕರಣ ಕಂಡ ಸಾರ್ವಜನಿಕರು ಭಯಬೀತರವಾಗಿ ಆತಂಕ ಮನೆ ಮಾಡಿದೆ