ವಿದ್ಯಾರ್ಥಿಗಳಿಗೆ ಹೂ. ನೀಡಿ ಶಾಲೆಗೆ ಸ್ವಾಗತಿಸಿದ ಮಲ್ಲೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ-ಶಿಕ್ಷಕಿಯರು.
ನಾಯಕನಹಟ್ಟಿ::ಮೇ.31. ಶಿಕ್ಷಣ ಇಲಾಖೆಯ ಆದೇಶದಂತೆ ಮೇ 31ರಂದು ರಾಜ್ಯದಾದ್ಯಂತ ಎಲ್ಲಾ ಶಾಲೆಗಳ ಪ್ರಾರಂಭೋತ್ಸವಕ್ಕೆ ಆದೇಶವನ್ನು ನೀಡಿತ್ತು ಆದರಂತೆ ಇಂದು ಹೋಬಳಿ ಮಲ್ಲೂರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿಕ್ಷಕಿಯರು ಶಾಲೆಯ ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಗೆ ಸ್ವಾಗತಿಸಿದರು.
ಇನ್ನೂ ವಿಶೇಷ ದಾಖಲಾತಿ ಆಂದೋಲನ ಅಂಗವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿ ಸಿಹಿಯೂಟವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.
ಇದೆ ವೇಳೆ ಶಾಲೆಯ ಮುಖ್ಯ ಶಿಕ್ಷಕ ನಾರಾಯಣನಾಯ್ಕ, ಶಾಸಕರಾದ ಆರ್ ರಾಜಣ್ಣ, ಎಂ ರಮೇಶ್, ಸಿ ಇ ಮಂಜುನಾಥ್ ಚಾರಿ, ಬಿ ಸುಮಿತ್ರಮ್ಮ, ಸಿ ಶೋಭಾ, ಎನ್ ಪುಷ್ಪಲತಾ, ಎಚ್ಎನ್ ವಿಜಯಲಕ್ಷ್ಮಿ,
ಜಿ ಎಸ್ ವಿಶಾಲ, ವಿ. ಪಾವನ, ಎಸ್ ಕೆ ಫರ್ಹೀನತಾಜ್, ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು