ಹಳ್ಳದಲ್ಲಿ ಮೇಯುತ್ತಿದ್ದ ಎಮ್ನೆ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ ಸ್ಥಳದಲ್ಲೇ ಎಮ್ಮೆ ಮೃತಪಟ್ಟ ಘಟನೆ ನಡೆದಿದೆ.
ಹೌದು
ಇದು ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗ್ರಾಮದ ಗುರುಮೂರ್ತಿ ಎಂಬ ರೈತನಿಗೆ ಸೇರಿದ ಗರ್ಭದಾರಣೆ ಎಮ್ಮೆ ಸಮೀಪದ ಹಳ್ಳದಲ್ಲಿ ಮಂಗಳವಾರ ಸಂಜೆ 4.30 ರ ಸಮಯದಲ್ಲಿ ಮೇಯುತ್ತಿದ್ದ ಎಮ್ಮೆ ಮೇಲೆ ಏಕಾಏಕಿ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ 50 ಸಾವಿರ ರೂ ಬೆಲೆ ಬಾಳುವ ಎಮ್ಮೆ ಮೃತಪಟ್ಟಿದ್ದು ರೈತನಿಗೆ ನಷ್ಟವಾಗಿದೆ.
ಇದೆ ದಾರಿಯಲ್ಲಿ ಬಸ್ ವಾಹನಗಳ ಸಂಚಾರ ವಿದ್ದು ಸದಸ್ಯ ವಿದ್ಯತ್ ತಂತಿ ಹರಿದು ಬಿದ್ದಾಗ ಯಾರೂ ಸಂಚರಿಸದೇ ಇರುವುದರಿಂದ ಬಾರಿ ವಿದ್ಯುತ್ ಅವಘಡಿದಿಂದ ಪಾರದಂತಾಗಿದೆ.
ಬಡಪಾಯಿ ರೈತ ಸಾಲ ಸೂಲ ಮಾಡಿ ಎಮ್ಮೆ ಸಾಕಾಣಿಕೆ ಮಾಡುತ್ತಿದ್ದ ಈಗ ಜೀವನಕ್ಕೆ ಆಧಾರವಾಗಿದ್ದು ಎಮ್ಮೆ ಮೃತಪಟ್ಟಿರುವು ಬರಸಿಡಿಲು ಬಡಿದಂತಾಗಿದೇ,
ವಿದ್ಯುತ್ ತಂತಿ ಹರಿದು ಬೀಳಲು ಬೆಸ್ಕಾಂ ಇಲಾಖೆ ನಿರ್ಲಕ್ಷಕ್ಕೆ ಕಾರಣವಾಗಿದೆ.
ಸಂಬಂದಪಟ್ಟ ಇಲಾಖೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಹಾಗೂ ವಿದ್ಯುತ್ ತಂತಿ ಬದಲಾಯಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.