ನಾಯಕನಹಟ್ಟಿ:: ಮೇ.27.
ನೀರಿನ ಶೇಖರಣೆ ಹಾಗೂ ಸ್ವಚ್ಛಗೊಳಿಸುವ ಬಗ್ಗೆ ನೀರ ಗಂಟೆಗಳು ಮೊದಲ ಆದ್ಯತೆ ನೀಡಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಎ.ನಸರುಲ್ಲಾ. ಹೇಳಿದ್ದಾರೆ.

ಸೋಮವಾರ ಪಟ್ಟಣದ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ
ನೀರಿನ ಶೇಖರಣೆ ಹಾಗೂ ಸ್ವಚ್ಛಗೊಳಿಸುವಿಕೆ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಅವರು ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ 16 ವಾರ್ಡುಗಳಲ್ಲಿ ನೀರಿನ ಟ್ಯಾಂಕರ್ ಗಳನ್ನ ಬೀಚಿಂಗ್ ಪೌಡರ್ ಬಳಸಿ ಸ್ವಚ್ಛಗೊಳಿಸುವ ಮೂಲಕ ನೀರು ಕಲುಷಿತಗೊಳಿಸದಂತೆ ನೋಡಿಕೊಳ್ಳಬೇಕು ಪ್ರತಿ ವಾರ್ಡಿನ ನೀರಿನ ಟ್ಯಾಂಕರ್ ಗಳನ್ನ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಶುದ್ಧ ನೀರನ್ನು ಕುಡಿಯಲು ಅನುವು ಮಾಡಿಕೊಡಬೇಕೆಂದು ನೀರು ಗಂಟೆಗಳಿಗೆ ಸೂಚನೆ ನೀಡುವ ಮೂಲಕ ಮನವರಿಕೆಯನ್ನು ಮಾಡಿದರು.

ಇದೇ ಸಂದರ್ಭದಲ್ಲಿ ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚೈತ್ರ, ದ್ವಿತೀಯ ದರ್ಜೆ ಸಹಾಯಕ ಟಿ. ತಿಪ್ಪೇಸ್ವಾಮಿ. ಪಿಎಂಸಿ ಇಂಜಿನಿಯರ್ . ಆಶಾ ಕಾರ್ಯಕರ್ತೆ ಬಿ. ಮಂಗಳಮ್ಮ. ಟಿ. ಎನ್. ತಿಪ್ಪೇಸ್ವಾಮಿ ಹರಳಯ್ಯ, ಎ.ಕೆ. ತಿಪ್ಪೇಸ್ವಾಮಿ ಓಬಣ್ಣ. ಇದ್ದರು.

Namma Challakere Local News
error: Content is protected !!