ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ ಸ್ವಚ್ಛತೆಯ ಮರಿಚಿಕೆ- ಹಂದಿ ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗ ಭೀತಿ.
ನಾಯಕನಹಟ್ಟಿ:: ಮೇ.28. ಬಡವರ ಆಸ್ಪತ್ರೆಯೆಂದೆ ಕರೆಯಲ್ಪಡುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳು ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗಗಳ ತಾಣವಾಗಿವೆ.
ಹೌದು ಇದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕಿರುವುದರಿಂದ ಬೆಳ್ಳಂಬೆಳಗ್ಗೆ ಹಂದಿಗಳ ಹಿಂಡು ಕಸವನ್ನು ಕೆದರಿತ್ತಿರುವ ದೃಶ್ಯ ಮಾಧ್ಯಮದ ಕ್ಯಾಮೆರಾ ಕಣ್ಣಿಗೆ ಸರಿಯಾಗಿದೆ. ನಿಮ್ಮ ಮನೆ ಅಕ್ಕ ಪಕ್ಕ ಚರಂಡಿಗಳ ಸ್ವಚ್ಛತೆ ಕಾಪಾಡಿ ಇಲ್ಲವಾದರೆ ಡೆಂಗ್ಯೂ. ಮಲೇರಿಯಾ. ಕಾಲರಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಸ್ವಚ್ಛತೆಯ ನೀತಿ ಪಾಠ ಹೇಳುವ ಆರೋಗ್ಯ ಇಲಾಖೆ ಆಸ್ಪತ್ರೆ ಆವರಣದಲ್ಲೆ ಸ್ವಚ್ಛತೆ ಕಾಪಾಡದೆ ಹಂದಿ -ಸೊಳ್ಳೆಗಳ ತಾಣವಾಗಿದ್ದು. ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಇನ್ನೂ ಹೆಚ್ಚಿನ ಖಾಯಿಲೆಗೆ ತುತ್ತಾಗುವ ಸಾದ್ಯತೆ ಇದೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆ ಆವರಣ ಸ್ವಚ್ಛತೆಗೆ ಮುಂದಾಗುವವರೆ ಕಾದು ನೋಡಬೇಕಿದೆ