ಚಳ್ಳಕೆರೆ : ಆಸ್ಪತ್ರೆಯಲ್ಲಿನ ರೋಗಿಗಳಿಗೆ ವೈದ್ಯರ ಉಪಚಾರಕ್ಕಿಂತ ದಾದಿಯರ ಆರೈಕೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದು ತಹಶೀಲ್ದಾರ್ ಎನ್ .ರಘುಮೂರ್ತಿ ಹೇಳಿದ್ದಾರೆ.

ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ದಿನದ 24 ಗಂಟೆ ರೋಗಿಯ ಬಗ್ಗೆ ನಿಗಾ ವಹಿಸುವ ಜವಾಬ್ದಾರಿ ದಾದಿಯರ ಮೇಲಿರುತ್ತದೆ.

ರೋಗಿಗಳ ನಿಜವಾದ ಜೀವ ರಕ್ಷಕರು ದಾದಿಯರು ಇವರ ಸ್ಮರಣೆಗಾಗಿ ಮೇ 12ನ್ನು ದಾದಿಯರ ದಿನಾಚರಣೆ ಎಂದು ಆಚರಿಸಲಾಗುತ್ತದೆ.

ವೈಧ್ಯರಾದ ಡಾ.ವೆಂಕಟೇಶ್ ಮಾತನಾಡಿ, ಈ ದಿನಾಚರಣೆಯ ಕೇಂದ್ರಬಿಂದು ಫ್ಲಾರೆನ್ಸ್ ನೈಟಿಂಗೇಲ್ ಇಟಲಿಯ ಫ್ಲಾರೆನ್ಸ್ ನಗರದಲ್ಲಿ 12 ಮೇ 1820 ವಿಲಿಯಂ ಎಡ್ವರ್ಡ್ ನೈಟಿಂಗೇಲ್ ಫ್ರಾನ್ಸಿಸ್ ನೈಟಿಂಗೇಲ್ ಶ್ರೀಮಂತ ಕುಟುಂಬದಲ್ಲಿ ಜನಿಸಿದಳು.

17ನೇ ವಯಸ್ಸಿನಲ್ಲಿ ಶುಶ್ರೂಷೆ ಆರಂಭಿಸಿದ ಈಕೆ ಜಗತ್ತಿನಲ್ಲಿ ಬಡವರ ಸೇವೆ ಮಾಡಬೇಕೆಂದು ಹೊಂಗನಸು ಕಂಡವಳು ಎಂದರು.

ಡಾ.ತಿಪ್ಪೇಸ್ವಾಮಿ ಮಾತನಾಡಿ,
ಈಕೆ ಟರ್ಕಿಯಲ್ಲಿ ಕ್ರಿಮಿಯರ್ ಯುದ್ಧದಲ್ಲಿ ಗಾಯಗೊಂಡವರಿಗಾಗಿ 1854ರ ಸಮಯಕ್ಕೆ ಜವಾಬ್ದಾರಿ ಕೊಟ್ಟರು 38 ಜನರ ತಂಡದೊಂದಿಗೆ ಗಾಯಗೊಂಡವರಿಗೆ ಕೈಯಲ್ಲಿ ದೀಪ ಹಿಡಿದು ಆರೈಕೆ ಮಾಡಿದಳು, ಇದರಿಂದ ಈಕೆಗೆ ದೀಪಧಾರಿಣಿ ಎಂಬ ಬಿರುದು ಬಂದಿದೆ.

1857 ರಲ್ಲಿ ಭಾರತದಲ್ಲಿ ನಡೆದ ಸಿಪಾಯಿ ದಂಗೆಯಲ್ಲಿ ಗಾಯಗೊಂಡವರಿಗೆ ಶುಶ್ರೂಷೆ ಮಾಡಿದ ಕೀರ್ತಿ ಫ್ಲಾರೆನ್ಸ್ ನೈಟಿಂಗೇಲ್ ಅವರಿಗೆ ಸಲ್ಲುತ್ತದೆ.

1907 ರಲ್ಲಿ ಆರ್ಡರ್ ಅಫ್ ಮೆರಿಟ್ ಇಂಗ್ಲೆಂಡಿನ ಬಹುಮಾನ ಪಡೆದ ಮೊದಲ ಮಹಿಳೆ ನೈಟಿಂಗೇಲ್ ತುಂಬು ಜೀವನ ನಡೆಸಿದ್ದಾರೆ.
ಈದೇ ಸಂದರ್ಭದಲ್ಲಿ ವೈದ್ಯರಾದ ಸಾಯಿನಾಗ ಜ್ಯೋತಿ, ಡಾ.ವೆಂಕಟೇಶ್, ಡಾ.ತಿಪ್ಪೇಸ್ವಾಮಿ, ಸಹಾಯಕ ಅಧಿಕಾರಿ ಪ್ರೇಮ್ ಕುಮಾರ್, ಹನುಮಂತರಾಜು ಆರೋಗ್ಯ ಸಹಾಯಕ ಕುದಾಪುರ ತಿಪ್ಪೇಸ್ವಾಮಿ, ಹೊನ್ನತ್ತಿ ಸಾವಿತ್ರಮ್ಮ, ಮಂಜುಳಾ, ಕವಿತಾ ಮಣಿ, ಸುಮಿತ್ರ , ತಿಪ್ಪಿರಮ್ಮ , ರಶ್ಮಿ, ಗೀತಾ, ಸರಸ್ವತಿ, ಗಾಯತ್ರಿ ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!