ಚಳ್ಳಕೆರೆ ನ್ಯೂಸ್ :
ವಿಜಯೇಂದ್ರ ಫ್ರೀ ಇದ್ದರೆ ಬಂದು ಕಟಿಂಗ್ ಮಾಡಲು
ಹೇಳಿ
ಶಿಕ್ಷಣ ಮಂತ್ರಿಗಳೆ ತಲೆ ಬಾಚಿಕೊಂಡು ಬನ್ನಿ, ಕಟಿಂಗ್
ಮಾಡಿಸಿಕೊಂಡು ಬನ್ನಿ ಎಂದು ಟೀಕೆ ಮಾಡಿದ್ದ, ಬಿಜೆಪಿ ರಾಜ್ಯಾಧ್ಯಕ್ಷ
ಬಿವೈ ವಿಜಯೇಂದ್ರ ಅವರಿಗೆ, ನನಗೆ ಕಟಿಂಗ್ ಮಾಡುವವನು
ಫ್ರೀ ಇಲ್ಲ, ವಿಜಯೇಂದ್ರ ಫ್ರೀ ಇದ್ದರೆ ಬಂದು ಕಟಿಂಗ್ ಮಾಡಲಿ
ಎಂದು ತಿರುಗೇಟು ನೀಡಿದರು.
ಅವರು ಚಿತ್ರದುರ್ಗ ದಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿದರು.
ಬಿಜೆಪಿಯವರಿಗೆ ಹೊಟ್ಟೆ ಉರಿ ಏನೇ
ಮಾಡಿದರೂ ಅದಕ್ಕೆ ಅವರು ಉಲ್ಟಾ ಮಾತಾಡುತ್ತಾರೆ ಎಂದರು.
ಟೀಕೆ ಮಾಡುವಾಗ ಗಂಭೀರತೆ ಇರಬೇಕು ಎಂದು ಮಧು
ಬಂಗಾರಪ್ಪ ಕಿಡಿಕಾರಿದ್ದಾರೆ.
ನಾವು ಚಿತ್ರ ರಂಗದಲ್ಲಿ ಚಿತ್ರ ಮಾಡಿದಾಗ ಇವರು ಪುಕ್ಸಟ್ಟೆ
ನೋಡ್ತಾರಾ? ಸಿನಿಮಾ ನೋಡಿಕೊಂಡು ಮೂರು ತಾಸು
ಮಜಾ ಮಾಡ್ತಾರೆ ಎಂದು ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ
ಬಿವೈ ವಿಜಯೇಂದ್ರ ಮೇಲೆ ಕಿಡಿ ಕಾರಿದರು.
ಯಾವುದೇ ವ್ಯಕ್ತಿಯ ಮೇಲೆ ಟೀಕೆ ಟಿಪ್ಪಣಿ ಮಾಡುವಾಗ ನೋಡಿ
ಮಾಡಿ ಟೀಕೆ ಮಾಡಬೇಕಾಗುತ್ತದೆ.
ಇದನ್ನು ಗಂಭೀರವಾಗಿ
ತೆಗೆದುಕೊಳ್ಳಬೇಕಾಗುತ್ತದೆ. ನಾವು ಚುನಾವಣೆಗೆ ಬಂದಾಗ ಅವರಿಗೆ
ವಿಶ್ವಾಸ ಕೊಡಬೇಕು ಎಂದರು.