ಚಳ್ಳಕೆರೆ ನ್ಯೂಸ್ :
ಮೋದಿ ಪ್ರಧಾನಿಯಾಗುವ ಮುನ್ನವೇ ಹೊಸ ಶಿಕ್ಷಣ
ನೀತಿ ಘೋಷಿಸಿದ್ದರು
ದೇಶದ ಭವಿಷ್ಯದ ದೃಷ್ಠಿಯಿಂದ ಪ್ರಧಾನಿ ಮಂತ್ರಿಯಾಗುವ ಮುನ್ನ
ದೇಶದ ಶಿಕ್ಷಣ ವ್ಯವಸ್ಥೆ ಬದಲಾಗುಬೇಕು ಎಂದು ಪ್ರಣಾಳಿಕೆಯಲ್ಲಿ
ಹೇಳಿದ್ದರು.
ಅದೇ ರೀತಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ
ಎಂದು ಹೇಳಿದ್ದರು ಎಂದು ಅರುಣ್ ಶಹಾಪುರ್ ಹೇಳಿದರು.
ಅವರು
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರದಲ್ಲಿ ಬಾಪೂಜಿ ಕಾಲೇಜಿನಲ್ಲಿ
ಮಾತಾಡಿದರು.
ರಾಜ್ಯ ಬಿಟ್ಟು ಬಹುತೇಕ ರಾಜ್ಯಗಳು ಹೊಸ ಶಿಕ್ಷಣ
ನೀತಿ ಅಳವಡಿಸಿಕೊಂಡು ಪಾಠ ಮಾಡುತ್ತಿವೆ.
ಆದರೆ ರಾಜ್ಯದಲ್ಲಿ
ಇದನ್ನು ವಿರೋಧಿಸಲಾಗಿದೆ ಎಂದರು.