ನಾಯಕನಹಟ್ಟಿ: ಕಷ್ಟಪಟ್ಟು ರಕ್ಷಣೆ ಮಾಡಿದ ಫಸಲನ್ನು ತೆರವುಗೊಳಿಸಿ ನಮಗೆ ಪರಿಹಾರ ಕೊಡಿ ಎಂದು ರೈತ ಓಬಯ್ಯನಹಟ್ಟಿ ಡಿ.ಹೆಚ್.ಪರಮೇಶ್ವರಪ್ಪ ಬೆಸ್ಕಾಂ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಅವರು ಬುಧವಾರ ಸಮೀಪದ ರೇಖಲಗೆರೆ ಕಂಪಳ ಸಾಗರ ವ್ಯಾಪ್ತಿಯ. ರಿ. ಸರ್ವೇ ನಂಬರ್: 22 / 2ಪಿ ನಲ್ಲಿರುವ 7 ಎಕರೆ 23 ಗುಂಟೆಯು ಬೋರಮ್ಮ ದೊಡ್ಡ ಹುಚ್ಚ ಮಲ್ಲಯ್ಯ ರವರಿಗೆ ಸೇರಿದ ಜಮೀನಿನಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದರು.

2018 ಮತ್ತು 2019 ರಲ್ಲಿ ಹಿರೇಮಲ್ಲನಹೊಳೆ – ತಳಕು ಹೈ ವೋಲ್ಟೇಜ್ ಲೈನಿನ ಕಾಮಗಾರಿ ಪ್ರಾರಂಭವಾಯಿತು.
ನಮ್ಮ ಜಮೀನಿನಲ್ಲಿ ಅಡಕೆ, ತೆಂಗಿನ ಗಿಡಗಳು ಒಂದು ವರ್ಷದಿಂದ ಒಂದುವರೆ ವರ್ಷದವು ಇದ್ದವು. 2008 -2010ರ ಸಮಯದಲ್ಲಿ ಆಗ ಕಾಮಗಾರಿ ನಡೆಸಲು ನಾವು ಅನುಮತಿ ನೀಡಲಿಲ್ಲ. ಹೈ ವೋಲ್ಟೇಜ್ ಲೈನು ನಮ್ಮ ಹೊಲದ ಅಡಕೆ, ತೆಂಗಿನ ಗಿಡಗಳ ಮೇಲೆ ಹಾದು ಹೋಗುತ್ತಿದ್ದರಿಂದ ಈ ಲೈನು ನಮ್ಮ ಹೊಲದ ಮೇಲೆ ಹಾದು ಹೋಗಬೇಕೆಂದರೆ ನಮಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹ ಮಾಡಿದಾಗ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಪರಿಹಾರ ಕೊಡುವ ಭರವಸೆ ನೀಡಿದರು.ಆಗ 2.10 ಲಕ್ಷ ರೂಪಾಯಿಗಳ ಚೆಕ್‌ನ್ನು ಕೊಡುವುದಾಗಿ ಹೇಳಿದರು. ನಮ್ಮ ಜಮೀನಿನಲ್ಲಿ ಈ ಲೈನು ಹಾದು ಹೋಗುವುದರಿಂದ 145 ತೆಂಗು,ಹುಣಸೆ,ಅಡಿಕೆ, ಮಾವು,ಸೀಬೆ ಗಿಡಗಳು ಹಾಳಾಗುತ್ತಿದೆ ಎಂದರೆ ,ಇಲ್ಲ ಇಂತಹ ಎರಡರಷ್ಟು ತೋಟ ಮಾಡುವಷ್ಟು ಹಣವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದ ಆಗಿನ ಅಧಿಕಾರಿಗಳು ಈಗ ಕೈಕೊಟ್ಟಿದ್ದಾರೆಂದು ರೈತ ಡಿ.ಹೆಚ್.ಪರಮೇಶ್ವರಪ್ಪ ಬೆಸ್ಕಾಂ ಅಧಿಕಾರಿಗಳ ವಿರುದ್ದ ಕಿಡಿಕಾರುತ್ತಿದ್ದಾರೆ.

ನಾವು ರೈತರು. ಕಷ್ಟಪಟ್ಟು ರಕ್ಷಣೆ ಮಾಡಿರುವಂತಹ ತೋಟಗಾರಿಕಾ ಫಸಲುಗಳು ಹಾಳಾಗುತ್ತದೆ ಎಂದರೆ ಆಗ 2.10 ಲಕ್ಷ ರೂಗಳ ಚೆಕ್ ನೀಡಿ ಕೈ ತೊಳೆದುಕೊಂಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ ರೈತ, ಇತ್ತೀಚೆಗೆ ಹೈವೋಲ್ಟೇಜ್ ತಂತಿಗಳಿಂದ ತೆಂಗು, ಅಡಿಕೆ ಗಿಡಗಳು ಸುಟ್ಟಿವೆ ಎಂದು ತಿಳಿಸಿದರು. ಈ ನಷ್ಟಕ್ಕೆ ಬೆಸ್ಕಾಂ ಇಲಾಖೆಯೇ ಹೊಣೆ ಎಂದಿದ್ದಾರೆ.

ಜಮೀನಿನ ರೈತನೊಂದಿಗೆ ಆಟ ಆಡುವುದನ್ನ ಕೈಬಿಟ್ಟು ಹೈವೋಲ್ಟೇಜ್ ಲೈನ್ ಕೆಳಗೆ ಇರುವ ತೆಂಗು, ಅಡಿಕೆ ಮರಗಳನ್ನ ಲೆಕ್ಕ ಹಾಕಿ ಅವುಗಳಿಗೆ ಸೂಕ್ತ ಮತ್ತು ನ್ಯಾಯಯುತವಾದ ಪರಿಹಾರವನ್ನ ನೀಡಿ ಆ ಮರಗಳನ್ನ ಕಟಾವು ಮಾಡಲು ಬೆಸ್ಕಾಂ ಇಲಾಖೆ ಮುಂದಾಗಬೇಕು.ಈ ರೈತನು ಕೋರ್ಟ್ ಕಚೇರಿ ಅಲೆಯದಂತೆ ಬೆಸ್ಕಾಂ ಇಲಾಖೆ ಕ್ರಮತೆಗೆದುಕೊಳ್ಳಬೇಕಿದೆ.
ನಿರ್ಲಕ್ಷ್ಯ ವಹಿಸಿದರೆ ಈ ಹೈವೋಲ್ಟೇಜ್ ಲೇನ್ ಗಳಿಂದ ರೈತನ ತೋಟ ಹಾಳಾಗುವ ಪರಿಸ್ಥಿತಿಗೆ ಬೆಸ್ಕಾಂ ಇಲಾಖೆ ಜವಾಬ್ದಾರಿ ಹೊರಬೇಕಾಗುತ್ತದೆ.

About The Author

Namma Challakere Local News
error: Content is protected !!