ಅದ್ದೂರಿಯಾಗಿ ಜರುಗಿದ ಶ್ರೀ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವ
ರಾಮಾಂಜನೇಯ.ಕೆ ಚನ್ನಗಾನಹಳ್ಳಿ
ಚಳ್ಳಕೆರೆ :
ವಿಜ್ಞಾನ ನಗರಿ ಚಳ್ಳಕೆರೆ ತಾಲೂಕಿನ ಆರಾಧ್ಯ ದೈವ ಶ್ರೀ ವೀರಭದ್ರಸ್ವಾಮಿ ದೊಡ್ಡ ರಥೊತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಮಧ್ಯಾಹ್ನ ೩.೩೦ ರಿಂದ ಪ್ರಾರಂಭವಾದ ರಥೋತ್ಸವದ ಪೂಜಾ ಕೈ ಕಾರ್ಯಗಳು ಸೇರಿದಂತೆ ೪.ಗಂಟೆ ಸುಮಾರಿಗೆ ರಥೋತ್ಸವ ಬಲಿ ಅನ್ನ ಹಾಕುವ ಮೂಲಕ ರಥೋತ್ಸವ ಮುಂದೆ ಸಾಗಿತು.
ಇನ್ನೂ ಪ್ರತಿ ವರ್ಷದಂತೆ ವರ್ಷ ಕೂಡ ಮುಕ್ತಿ ಬಾವುಟ ಹಾರಾಜು ಪ್ರಕ್ತಿಯೆ ನಡೆಯಿತು. ಅದರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಚಳ್ಳಕೆರೆ ಶ್ರೀವೀರಭದ್ರಸ್ವಾಮಿ ಭಕ್ತರಾದ ಕೆ.ಸಿ.ವೀರೇಂದ್ರ ಪಪ್ಪಿರವರು ಸುಮಾರು ೩೦ ಲಕ್ಷಕ್ಕೆ ಹಾರಾಜು ಪಡೆಯುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ಇದೇ ಸಂಧರ್ಭದಲ್ಲಿ ಜಿಲ್ಲಾ ಉಸ್ತೂವಾರಿ ಮಂತ್ರಿ ಡಿ.ಸುಧಾಕರ್, ಚಳ್ಳಕೆರೆ ಕ್ಷೇತ್ರದ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಭಾಗವಹಿಸಿದ್ದರು.
ಇನ್ನೂ ರಥೋತ್ಸವದ ಭಕ್ತರು ಶ್ರದ್ದೆ, ಭಕ್ತಿಯಿಂದ ರಥೋತ್ಸವದಲ್ಲಿ ನಗರದದಿಂದ ಜನಸಾಗರದ ಮೂಲಕ ಬಣ್ಣಗಳ ಬಾವುಟಗಳಿಂದ ಅಲಂಕರಿಸಲ್ಪಟ್ಟ ರಥದಲ್ಲಿ ಶ್ರೀ ವೀರಭದ್ರಸ್ವಾಮಿಯನ್ನು ಆಸೀನಗೊಳಿಸಿ ವಿಶೇಷ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ನಂತರ ಜಯಘೋಷಣೆಗಳೊಂದಿಗೆ ಅಪಾರ ಸಂಖ್ಯೆಯ ಭಕ್ತಸಮೂಹ ಸಮ್ಮುಕದಲ್ಲಿ ರಥದ ಹಗ್ಗಕ್ಕೆ ಕೈ ಹಾಕಿ ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಇನ್ನೂ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿರವರು ಸುಮಾರು ದೂರ ರಥೋತ್ಸವವ ಹಗ್ಗವನ್ನು ಹಿಡಿದು ಎಳೆಯುವ ಮೂಲಕ ಸ್ವಾಮಿ ಕೃಪೆಗೆ ಪಾತ್ರರಾದರು.
ಜೊತೆಗೆ ತೇರು ಬೀದಿಯಲ್ಲಿ ವಿವಿಧ ಜಾನಪದ ಕಲಾತಂಡಗಳಾದ ಕೋಲಾಟ, ತಮಟೆ ವಾಧ್ಯಗಳೊಂದಿಗೆ ಭಕ್ತರು ಸ್ವಾಮೀಯ ರಥಕ್ಕೆ ಸೂರುಬೆಲ್ಲ ಮೆಣಸು, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವ ಮೂಲಕ ಸ್ವಾಮಿಯಲ್ಲಿ ಮಡಿಹೊಕ್ಕರು.
ವಿಶೇಷತೆ :
ದೇವರ ಆಚರಣೆಗೆ ಇಲ್ಲಿ ವಿಶೇಷ ಸ್ಥಾನವಿದ್ದು ಅದರಲ್ಲಿ ನಗರದ ಆರಾದ್ಯದೈವೆಂದೆ ಪ್ರಸಿಧ್ದಿಯಾದ ಶ್ರೀ ವೀರಭದ್ರಸ್ವಾಮಿ ಇಲ್ಲಿನ ಬುಡುಕಟ್ಟು ಆಚರಣೆಗೆಳಿಗೆ ಸಂಪ್ರದಾಯದ ಕಟ್ಟುಪಾಡುಗಳಿಗೆ ಒಂದಾಗಿದ್ದಾರೆ.
ಮ್ಯಾಸನಾಯಕ ಜನಾಂಗದ ಪ್ರಮುಖದೇವತೆಯದ ಸಿಂತಾಲಪಾಪವ್ವಳಿಗೆ ಪ್ರತೀಕವಾದ ವೀರಭದ್ರಸ್ವಾಮಿ ಜಾತ್ರೆ ಇಲ್ಲಿನ ಭಕ್ತಾಧಿಕಾಳಿಗೆ ಕೈಗನ್ನಡಿಯಾಗಿ ಸಾಕ್ಷಿಯಾಗಿದ್ದಾನೆ.
ತಾಲ್ಲೂಕಿನ ಗ್ರಾಮ ದೇವರು ಎಂದೇ ಕರೆಯುವ ಶ್ರೀವೀರಭದ್ರಸ್ವಾಮಿ ಜಾತ್ರೆ ಕಳೆದ ಒಂದುವಾರದಿAದ ವಿವಿಧ ಕಾರ್ಯಕ್ರಮಗಳೊಂದಿಗೆ ಈ ಜಾತ್ರೆಯ ಮಧ್ಯದಲ್ಲಿಯೇ ಬುಡಕಟ್ಟು ಜನರ ಆಚರಣೆ ಪ್ರಾರಂಭವಾಗುತ್ತದೆ. ತಾಲ್ಲೂಕಿನ ಸುತ್ತಮುತ್ತಲು ಮ್ಯಾಸಬೇಡರು ವಾಸಿಸುವ ಗ್ರಾಮಗಳಾದ ನನ್ನಿವಾಳ, ಗೌಡ್ರಹಟ್ಟಿ, ಗರ‍್ಲಕಟ್ಟೆ, ಚಂದ್ರಗಿರಿ, ರತ್ನಗಿರಿ, ನಿಂರ‍್ಲಹಟ್ಟಿ, ಪೆತ್ತಮ್ಮನವರಹಟ್ಟಿ, ತೋಡ್ಲಾರಹಟ್ಟಿ, ವರವಿನೋವರಹಟ್ಟಿ, ನಕ್ಲರಹಟ್ಟಿ, ಬಂಡೆಹಟ್ಟಿ, ಉಂಡೆಜಾಲಮ್ಮನಹಟ್ಟಿ ಹೀಗೆ ಸುಮಾರು ೨೫ರಿಂದ ೩೦ ಗ್ರಾಮದ ಬುಡಕಟ್ಟು ಮ್ಯಾಸಬೇಡ ಜನರ ಆರಾಧ್ಯ ದೈವವೆಂದೇ ಕರೆಯುವ ಸಿಂತಾಲ ಪಾಪವ್ವ ದೇವರಿಗೆ ಉಪವಾಸವಿದ್ದು, ಕಾಲಿಗೆ ಪಾದರಕ್ಷಗಳನ್ನು ಹಾಕದೆ ಸುಮಾರು ೧೮ ರಿಂದ ೨೦ ಕಿ.ಮೀ ದೂರದವರೆಗೂ ನಡೆದು ಕೊಂಡುಬAದು ಹರಕೆ ತೀರಿಸುತ್ತಾರೆ. ಇದರಿಂದ ಉತ್ತಮ ಆರೋಗ್ಯ, ಮಳೆ-ಬೆಳೆ ಆಗುತ್ತದೆ ಎಂಬ ನಂಬಿಕೆ ಇವರಲ್ಲಿ ಮನೆ ಮಾಡಿದೆ.
ಹಿನ್ನೆಲೆ;- ಗ್ರಾಮಕ್ಕೆ ತನ್ನ ದನಕರುಗಳನ್ನು ಮೇಯಿಸುಲು ಬಂದ ಗಾದ್ರಿಪಾಲನಾಯಕನ ಮಗಳಾದ ಸಿಂತಾಲಪಾಪವ್ವಳಿಗೆ ಹಾವೊಂದು ಕಚ್ಚಿದ ಪರಿಣಾಮವಾಗಿ ಆಕೆ ಅಲ್ಲಿಯೇ ಸಾವನಪ್ಪುತ್ತಾಳೆ. ದೈವ ಸಂಭೂತಳಾದ ಸಿಂತಾಲಪಾಪವ್ವಳನ್ನು ಕಚ್ಚಿದ್ದು ತಪ್ಪಾಯಿತು. ಇವಳು ಮ್ಯಾಸಬೇಡ ಕುಟುಂಬಗಳ ಆರಾಧ್ಯ ದೈವವಾಗಲಿ ಎಂದು ಕಚ್ಚಿದ ಹಾವು ವರವನ್ನು ನೀಡಿ ಅಲ್ಲಿಯೇ ಸಾವನಪ್ಪುತ್ತಾಳೆ.. ಅಂದಿನಿAದ ಇಂದಿನವರೆಗೂ ವರ್ಷಕ್ಕೊಮ್ಮೆ ಈ ದೇವಿರಿಗೆ ವಿಶೇಷ ಪೂಜೆ ನಡೆಯುತ್ತಿದೆ.
ಕಳೆದ ಸುಮಾರು ಐದಾರು ತಲೆಮಾರುಗಳ ಜನರು ಈ ದೇವಿಯನ್ನು ಪೂಜೆಸಿ ತಮ್ಮ ಹರಕೆಗಳನ್ನು ಕಟ್ಟಿಕೊಂಡು ಗ್ರಾಮದ ದೇವರಾದ ವೀರಭದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವದ ದಿನ ತಾಲೂಕಿನ ಪಾವಗಡ ರಸ್ತೆಯಲ್ಲಿರುವ ಸಿಂತಾಲಪಾಪವ್ವಳ ಸಮಾಧಿಗೆ ಬಾಳೆಹಣ್ಣು, ಕಾಯಿ, ಹರಕೆಯ ವಸ್ತುಗಳಾದ ಸೀರೆ, ಕುಪ್ಪಸ, ಬಂಗಾರದ ವಸ್ತುಗಳು ಹೀಗೆ ಇನ್ನಿತರ ವಸ್ತುಗಳನ್ನು ತಂದು ತಾಯಿಯ ಸಮಾಧಿಯ ಮೇಲಿಟ್ಟು ಪೂಜಿಸಿ ನಂತರ ಶ್ರೀವೀರಭದ್ರಸ್ವಾಮಿ ಜಾತ್ರೆ ಮಾಡಲು ಮುಂದಾಗುತ್ತಾರೆAದು ಮ್ಯಾಸಬೇಡ ಸಮುದಾಯದ ಮುಖಂಡ ಪಾಳೇಗಾರ ಪಿಟಿ..ತಿಪ್ಪೆಸ್ವಾಮಿ ಮಾಸ್ಟರ್ ಹೇಳುತ್ತಿದ್ದಾರೆ.
ಕಾರ್ಯಕ್ರಮಗಳು:
ಕಳೆದ ವಾರದಿಂದ ಪ್ರಾರಂಭವಾದ ವೀರಭದ್ರಸ್ವಾಮಿ ಜಾತ್ರೆಗೆ ಏಕಾದಶ ರುದ್ರಾಭಿಷೇಕ, ಕಂಕಣದಾರಣೆ ಮತ್ತು ಹೋಮ ಸ್ಥಾಪನೆ, ನಂತರ ದೊಡ್ಡರಥಕ್ಕೆ ಕಳಸ ಸ್ಥಾಪನೆ, ರಾತ್ರಿ ಶ್ರೀಸ್ವಾಮಿಯ ಉತ್ಸವ, ಮತ್ತು ದೊಟ್ಟ ರಥಕ್ಕೆ ತೈಲಾಭಿಷೇಕ, ಸ್ವಾಮಿಗೆ ವೀರಗಾಸೆ, ಬೆಳ್ಳಿ ಪಲ್ಲಕ್ಕಿಯಲ್ಲಿ ಗಂಗಾದೇವತೆಗೆ ಉತ್ಸವ, ಹಾಗೂ ದೊಡ್ಡೆರಿ ಸಂಸ್ಥಾನ ಮಠದ ದೊಣ್ಣೆ ಮನೆತನ ದವರಿಂದ ಹಾಗೂ ಪುರಂತರರಿAದ ವೀರನಾಟ್ಯ, ಅಗ್ನಿಕುಂಡ ಮತ್ತು ಆಂದೋಳಿಕೋತ್ಸವ, ನಂತರ ದೊಡ್ಡ ರಥೋತ್ಸವ ನಡೆಯಿತು.
ನಂತರ ನಾಳೆ ಗುರುವಾರ ಗ್ರಾಮ ದೇವತೆಯ ಚಳ್ಳಕೆರೆಯಮ್ಮ ಹಾಗೂ ಉಡುಸಲಮ್ಮನವರ ಉತ್ಸವ, ಪುರಂತರ ವೀರನಾಟ್ಯಾ,(ಕಡುಬಿನ ಕಾಳಗ) ಮತ್ತು ಕೊನೆಯ ದಿನವಾದ ಶುಕ್ರವಾರ ಕಂಕಣ ವಿಸರ್ಜನೆ, ಹೊಮ, ಶಾಂತಿ, ಓಕಳಿಹಾಕಿ ಸಂಭ್ರಮಿಸುತ್ತಾರೆ.

ಬಾಕ್ಸ್ಮಾಡಿ :
ಬರಪೀಡಿತ ಪ್ರದೇಶವಾದ ಚಳ್ಳಕೆರೆಯಲ್ಲಿ ದೇವರ ಉತ್ಸವಗಳಿಗೆ ನಮ್ಮ ಬುಡಕಟ್ಟು ಸಮುದಾಯದ ಭಕ್ತಾಧಿಗಳು ಶ್ರಧ್ದಾ ಭಕ್ತಿಯಿಂದ ಮುಂಚೂಣಿಯಲ್ಲಿರುತ್ತಾರೆ, ಮೇ.೧೮ರಿಂದ ಪ್ರಾರಂಭವಾದ ವೀರಭದ್ರಸ್ವಾಮಿ ಜಾತ್ರೆಗೆ ವಿವಿಧ ಊರುಗಳಿಂದ ಜಾನ ಸಾಗರ ಹರಿದು ಬರುತ್ತದೆ, ಒಂದು ತಿಂಗಳ ಕಾಲ ಎತ್ತುಗಳ ಪರಿಷೆ (ಜಾತ್ರೆ) ನಡೆಯುತ್ತದೆ ವಿವಿಧ ಜಾತಿಯ ಎತ್ತುಗಳ ಸಮಾಗಮ ಇಲ್ಲಿ ನಡೆಯುತ್ತದೆ.
— ಸತ್ಯನಾರಾಯಣ,
ಶ್ರೀಸತ್ಯನಾರಾಯಣ ಇರಿಗೇಷನ್ಸ್ ಮಾಲೀಕರು ಚಳ್ಳಕೆರೆ

ಪೋಟೊ೧ ಚಳ್ಳಕೆರೆ ನಗರದ ಶ್ರೀವೀರಭದ್ರಸ್ವಾಮಿ ದೇವರ ಶಿಖರದ ಹೊರ ನೋಟ
ಪೋಟೊ ೨ಚಳ್ಳಕೆರೆ ನಗರದ ಶ್ರೀವೀರಭದ್ರಸ್ವಾಮಿ ದೇವರ ಒಳನೋಟ.
ಪೋಟೊ ಸಿಎಲ್‌ಕೆ೦೩ ಬಣ್ಣದ ಬಾವುಟಗಳಿಂದ ಅಲಂಕೃತಗೊAಡ ದೊಡ್ಡ ರಥೋತ್ಸವ
ಪೋಟೋ, ಸಿಎಲ್‌ಕೆ೦೪ ಚಳ್ಳಕೆರೆ ನಗರದ ಹೊರವಲಯದಲ್ಲಿರುವ ಸಿಂತಾಲಪಾಪವ್ವ ಸಮಾಧಿಗೆ ಪೂಜೆ ಸಲ್ಲಿಸುತ್ತಿರುವ ಮ್ಯಾಸಬೇಡ ಕುಟುಂಬದ ಸದಸ್ಯರು.
ಪೋಟೋಸಿಎಲ್‌ಕೆ೦೫ ಚಳ್ಳಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬುಡಕಟ್ಟು ಜನರು ಬರಿಗಾಲಿನಲ್ಲಿಯೇ ನಡೆದುಕೊಂಡು ಸ್ವಾಮಿಯ ರಥೋತ್ವಕ್ಕೆ ಬರುತ್ತಿರುವುದು.

Namma Challakere Local News
error: Content is protected !!