ಚಳ್ಳಕೆರೆ ನ್ಯೂಸ್ :
ಚೇಸ್ ಮಾಡಿ ಗೋವು ರಕ್ಷಿಸಿದ ವಿಹೆಚ್ ಪಿ
ಭಜರಂಗದಳ ಕಾರ್ಯಕರ್ತರು
ಕಂಟೇನರ್ ನಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 14
ಜಾನುವಾರುಗಳನ್ನು ವಿಹೆಚ್ ಪಿ ಹಾಗೂ ಭಜರಂಗ ದಳದ
ಕಾರ್ಯಕರ್ತರು ಸಿನಿಮೀಯ ರೀತಿ ಚೇಸ್ ಮಾಡಿ ರಕ್ಷಸಿದ್ದಾರೆ.
ಬೆಂಗಳೂರಿನಿಂದ ದಾವಣಗೆರೆ ಮಾರ್ಗವಾಗಿ ಹೋಗುತ್ತಿದ್ದಾಗ,
ಖಚಿತ ಮಾಹಿತಿ ಮೇರೆಗೆ ಕಂಟೇನರ್ ಚೇಸ್ ಮಾಡಿದ
ಕಾರ್ಯಕರ್ತರು,
ಚಿತ್ರದುರ್ಗದ ಮದಕರಿಪುರ ಬಳಿ ಹೊಸ
ಸೇತುವೆ ಬಳಿ ತಡೆದು ರಕ್ಷಿಸಿದ್ದಾರೆ.
ನಂತರ ಸ್ಥಳಕ್ಕೆ ಭೇಟಿ ನೀಡಿದ
ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ,
ಪ್ರಕರಣ ದಾಖಲಿಸಿಕೊಂಡಿದ್ದಾರೆ.