ಚಳ್ಳಕೆರೆ ನ್ಯೂಸ್ :
ರಾತ್ರಿ ಸುರಿದ ಮಳೆಗೆ ರಸ್ತೆ ಪಕ್ಕದ ಹೊಲಕ್ಕೆ ಉರುಳಿ ಬಿದ್ದ ಬೋರ್ ವೆಲ್ ಲಾರಿ
ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಸಮೀಪದಲ್ಲಿ ಬೋರೆವಲ್ ಲಾರಿಯೊಂದು ರಸ್ತೆ ಪಕ್ಕದ ಜಮೀನೊಂದರಲ್ಲಿ ಉರುಳಿ ಬಿದ್ದ ಘಟನೆ ಜರುಗಿದೆ.
ಚಳ್ಳಕೆರೆ ಮಾರ್ಗವಾಗಿ ಬರುತ್ತಿದ್ದ ಬೋರ್ ವೆಲ್ ಲಾರಿಯೊಂದು ಡಾಂಬರ್ ರಸ್ತೆ ಪಕ್ಕಕ್ಕೆ ಸರಿದ ತಕ್ಷಣ ಭಾರವಾದ ಲಾರಿ ಮಣ್ಣಿನಲ್ಲಿ ಕಿಸಿದು ರಸ್ತೆ ಪಕ್ಕಕ್ಕೆ ಬಿದ್ದಿದ್ದೆ.
ಯಾವುದೇ ಪ್ರಾಣಪಾಯವಾಗಿಲ್ಲ ಚಾಲಕ ಹಾಗೂ ನಿರ್ವಾಹಕ ಇತರರಿಗೆ ಗಾಯಗಳು ಹಾಗಿವೆ ಎಂಬುದು ವರದಿಯಾಗಿದೆ.