ಚಳ್ಳಕೆರೆ : ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ತಜ್ಞನರು ವರದಿಗಳು ನೀಡಿದರು ಸರಕಾರ ಪರಿಗಣಿಸದೆ ಜಾಣ ಕುರುಡುತನ ತೋರುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಸರಕಾರದ ವಿರುದ್ಧ ಚಾಟಿ ಬೀಸಿದರು.
ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಲು ಹೋರಾಟದ ಕ್ರಿಯಾ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯ ಪೂರ್ವ ಭಾವಿ ಸಭೆಗೆ, ಪೂರ್ವ ಸಭೆಯಲ್ಲಿ ಮಾತನಾಡಿದರು.
ಸಂವಿಧಾನ ಬದ್ದ ವರದಿ ಬಂದು ಸುಮಾರು ತಿಂಗಳುಗಳು ಹಾದರು ಯಾವುದೇ ಕ್ರಮ ಕೈ ಗೊಂಡಿಲ್ಲ, ನಾಗಮೋಹನ್‌ದಾಸ್ ವರದಿಗೆ ಯಾವುದೇ ಕಾನೂನು ತೊಡಕು ಇಲ್ಲ, ಆದರೆ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಜಾತಿವಾರು ಹೆಚ್ಚಳ ಮಾಡುವ ಕೆಲಸವಾಗಬೇಕು, ಆದರೆ ಸರಕಾರ ನಿದ್ದೆ ಮಾಡುವುತರ ನಟನೆ ಮಾಡುತ್ತಿದೆ ಒರತು ನಿದ್ದೆ ಮಾಡುತ್ತಿಲ್ಲ, ಮಲಗಿದವರನ್ನು ಹೆಚ್ಚರಿಸಬಹುದು ಆದರೆ ಮಲಗಿದಂತೆ ನಟನೆ ಮಾಡುವವರನ್ನು ಹೆಚ್ಚರಿಸುವುದು ಕಷ್ಟಸಾಧ್ಯ, ಜಾತಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂದರು.
ಮಾಜಿ ಉಪಾಧ್ಯಕ್ಷ ಟಿ.ವಿಜಯ್‌ಕುಮಾರ ಮಾತನಾಡಿ, ನಾಗಮೋಹನ್‌ದಾಸ್, ಹಾಗೂ ಸದಾಶಿವ ವರದಿ ಜಾರಿಗೊಳಿಸಲು ಇಂದಿನ ಪರಿಸ್ಥಿತಿಯಲ್ಲಿ ಸ್ವಾಮೀಜಿಗಳು ಬೀದಿಗೆ ಬಂದು ಉಪವಾಸ ಇರುವುದು, ಸತ್ಯಗ್ರಹ ಮಾಡುವುದು ವಿಪರ್ಯಾಸದ ಸಂಗತಿ, ಸ್ವಾಮೀಜಿಗಳು ಸಮಾಜದ ಶ್ರೋಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ, ಅವರ ಜೊತೆಗೆ ವರದಿಯನ್ನು ಸಂಪೂರ್ಣವಾದ ಅದ್ಯಯನದ ಮೂಲಕ ಸಮುದಾಯದಗಳ ಅಭಿವೃದ್ಧಿಗೆ ಸರಕಾರ ತಿರ್ಮಾನಿಸಲು ಪ್ರತಿಭಟನೆ ಅನಿವಾರ್ಯ ಎಂದರು
.
ಶಿಕ್ಷಕ ಜಿ.ಟಿ.ವೀರಭದ್ರನಾಯಕ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಾತಿಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಲು ಹೋರಾಟ ಅನಿವಾರ್ಯ ಕುರುಡು ಸರಕಾರಕ್ಕೆ ಮೀಸಲಾತಿ ಹೆಚ್ಚಳ ಬಗ್ಗೆ ಮೂರು ಹಂತದ ಕಾರ್ಯಕ್ರಮದ ಮೂಲಕ ಚಾಟಿ ಬೀಸೋಣ ಎಂದರು.
ಮಾಜಿ ತಾಪಂ.ಸದಸ್ಯ ಹೆಚ್.ಸಮರ್ಥರಾಯ್, ಎಲ್‌ಐಸಿ ತಿಪ್ಪೆಸ್ವಾಮಿ, ಮಾತನಾಡಿದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕಾ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ರಮೇಶ್, ವೀರಭದ್ರಪ್ಪ, ರಾಘವೆಂದ್ರ, ಕವಿತಾ, ಸುಮಾ, ರುದ್ರನಾಯಕ, ಚಳ್ಳಕೆರೆಪ್ಪ, ಡಿ.ಚಂದ್ರು, ಶಿವಮೂರ್ತಿ, ಇತರರು ಇದ್ದರು.
ಜಾತಿ ಜಾನಂಗದ ಅಭಿವೃದ್ಧಿಗೆ ಶ್ರಮಿಸಿದ ಸುಭಿಕ್ಷೆಯಾಗಿ ರಾಜ್ಯ ಇರಬೇಕು, ಮಾರ್ಚ 30ರಂದು ಸತ್ಯಗ್ರಹ ಬೇಡ ಎಂದು ಹೇಳಿದ ಸರಕಾರ ಇದುವರೆಗೂ ಚಕಾರ ಎತ್ತಿಲ್ಲ, ನಂತರ ಏಪ್ರಿಲ್ 10ಕ್ಕೆ ಮೀಸಲಾತಿ ಹೆಚ್ಚಳ ಮಾಡುತ್ತೆವೆ ಎಂದು ಹೇಳಿದವರು ಇದುವರೆಗೆ ಅದರ ಗೋಜಿಗೆ ಹೋಗಿಲ್ಲ, ಈಗೀರುವ ಮೀಸಲಾತಿಯ ಅನುಕ್ರಮವಾಗಿ 15 ರಿಂದ 17ಕ್ಕೆ ಹೆಚ್ಚಳ ಹಾಗೂ 3 ರಿಂದ 7ವರೆಗೆ ಹೆಚ್ಚಿಸಲು ಸರ್ಕಾರ ಗಂಬೀರವಾಗಿ ಪರಿಗಣಿಸಬೇಕು –ಶಾಸಕ ಟಿ.ರಘುಮೂರ್ತಿ