ಚಳ್ಳಕೆರೆ : ತ್ರೇತಾಯುಗದಲ್ಲಿ ಸೀತೆ ಅಶೋಕವನದಲ್ಲಿ ಮೌನ ಪ್ರತಿಭಟನೆಯ ಮುಖಾಂತರ ಒಂಟಿಯಾಗಿ ಕಾಲಕಳೆದು ರಾವಣನ ಸಂಹಾರಕ್ಕೆ ಕಾರಣರಾದರು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.

ಚಳ್ಳಕೆರೆ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದವರು ಏರ್ಪಡಿಸಿದ್ದ ವಾಸವಿ ಕನ್ಯಕಾಪರಮೇಶ್ವರಿ ಜಯಂತೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.

ದ್ವಾಪರಯುಗದಲ್ಲಿ ದ್ರೌಪತಿ ಛಲ ಮತ್ತು ಹೋರಾಟದಿಂದ ಕುರುಕ್ಷೇತ್ರಕ್ಕೆ ನಾಂದಿ ಹಾಡಿ ಧರ್ಮ ಪ್ರತಿಷ್ಠಾಪನೆಗೆ ಕಾರಣಳಾದಳು ಹಾಗೆಯೇ ಈ ಸಮಾಜಕ್ಕೆ ವಾಸವಿ ಕನ್ಯಕಾಪರಮೇಶ್ವರಿ ರವರ ಪರಂಪರೆ ಮತ್ತು ಇತಿಹಾಸ ಅಷ್ಟೇ ಇದೆ ತನ್ನ ರಾಜ್ಯದ ಸೈನಿಕರ ಪ್ರಾಣ ಸಂರಕ್ಷಣೆ ಮಾಡಲು ಇವರು ಅಗ್ನಿ ಪ್ರವೇಶ ಮಾಡಿದ್ದು ಧರ್ಮವನ್ನು ಸಂರಕ್ಷಣೆ ಮಾಡಲು ಅಪ್ರತಿಮ ಸುಂದರಿಯಾಗಿದ್ದರು

ಲೌಕಿಕ ಬದುಕನ್ನು ತ್ಯಾಗ ಮಾಡಿ ಶಿವನೊಂದಿಗೆ ಅನುರಕ್ತಳಾಗಿ ನ್ಯಾಯ ನೀತಿ ಧರ್ಮಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶವನ್ನು ನೀಡಿ ಪರೋಪಕಾರ ಪಾರಮಾರ್ಥದ ಕಡೆಗೆ ಮನುಕುಲವನ್ನು ತೆಗೆದುಕೊಂಡು ಹೋದಂತ ಸಾತ್ವಿಕ ಮಹಿಳೆ ಇವರ ಆದರ್ಶ ಗಳನ್ನ ಇಂದಿನ ಪೀಳಿಗೆಯೂ ಅನುಕರಣಿಸುವುದು ಅಗತ್ಯವಾಗಿದೆ

ಶ್ವೇತಾ ಯುಗದ ಸೀತೆ, ದ್ವಾಪರ ಯುಗದ ದ್ರೌಪದಿ ಇಬ್ಬರು ಧರ್ಮ ಸಂಸ್ಥಾಪನೆಗೆ ಕಾರಣ ಕರ್ತರಾಗಿದ್ದಾರೆ, ಹಾಗೆಯೇ ವಾಸವಿ ಕನ್ಯಕಾಪರಮೇಶ್ವರಿ ದೇವಿ ವಿಷ್ಣುವರ್ಧನ ರಾಜನ ಕ್ರೌರ್ಯವನ್ನು ಹಿಮ್ಮೆಟ್ಟಿಸಿ ಧರ್ಮಸಂಸ್ಥಾಪನೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ

ಆರ್ಯವೈಶ್ಯ ಸಮಾಜವು ಸ್ವಾಭಿಮಾನದ ಮೂಲಕ ಸ್ವಾವಲಂಬಿ ಬದುಕನ್ನು ದೇಶದಾದ್ಯಂತ ಕಟ್ಟಿಕೊಂಡು ಇತರೆ ಸಮಾಜಕ್ಕೆ ಮಾದರಿಯಾಗಿದೆ ತಮ್ಮ ಸಮಾಜದ ಮಕ್ಕಳು ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಉನ್ನತ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ್ದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಾಜದ ವ್ಯಕ್ತಿಗಳು ಇನ್ನೂ ಎತ್ತರಕ್ಕೆ ಬೆಳೆಯಬೇಕು ಸಮಾಜ ಅತ್ಯಂತ ಉತ್ತಮವಾದ ಸಂಸ್ಕಾರವನ್ನು ಒಂದಿದ್ದು ಸಾತ್ವಿಕ ಸಮಾಜವಾಗಿದೆ ಎಂದು ಹೇಳಿದರು

ಸಮಾರಂಭದಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಘುನಾಥ್ ಬಾಬು, ಸಮಸ್ತ ಆರ್ಯವೈಶ್ಯ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Namma Challakere Local News
error: Content is protected !!