ಚಳ್ಳಕೆರೆ ನ್ಯೂಸ್ :
ವಿಶ್ವ ಜೇನುನೊಣಗಳ ದಿನಾಚರಣೆ ಅಂಗವಾಗಿ ಇಲ್ಲೊಬ್ಬ ರೈತ ಜೇನು ಪೆಟ್ಟಿಗೆಗಳ ಜೊತೆಗೆ ಶುಭಾಷಯಗಳು ಕೊರಿದ್ದಾರೆ.
ಹೌದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಸಮೀಪದಲ್ಲಿ ಬಂಜರು ಭೂಮಿಯನ್ನು ಹಸಿರಾಗಿಸಿ ವಿವಿಧ ತಳಿಯ ಗಿಡಮರಗಳನ್ನು ಬೆಳೆಸಿ ಜಾತಿವಾರು ಪ್ರಾಣಿಗಳು ಸಾಕುವುದರ ಮೂಲಕ ಮಾದರಿ ರೈತನಾಗಿ ಹೊರಹೊಮ್ಮಿದ್ದಾನೆ
ಪ್ರಗತಿಪರ ರೈತನೆಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದ ಡಾ.ಆರ್.ಎ.ದಯಾನಂದ ಮೂರ್ತಿ ಯವರ ಕಾರ್ಯ ನಿಜಕ್ಕೂ ಶ್ಲಾಘನೀಯ
ವಿವಿಧ ಬೆಳೆಗಳನ್ನು ಬೆಳೆದು ಯುವ ರೈತರಿಗೆ ಮಾದರಿಯಾದ ಇವರು ಜೇನು ಕೃಪಿಯಲ್ಲಿ ಕೂಡ ಉತ್ತಮ ಲಾಭ ಪಡೆಯುತ್ತಿದ್ದಾರೆ.
ಅದರಂತೆ ಇಂದು ಡಾ.ಆರ್ ಎ.ದಯಾನಂದ ಮೂರ್ತಿ ತನ್ನ ತಾಯಿಯೊಂದಿಗೆ ಜೇನು ಪೆಟ್ಟಿಗೆಗಳ ಮೂಲಕ ವಿಶ್ವ ಜೇನುನೊಣಗಳ ದಿನಾಚರಣೆಗೆ ಶುಭಾಷಯಗಳನ್ನು ಕೋರಿದ್ದಾರೆ.