[5:02 PM, 5/20/2024] ರಾಮುದೊಡ್ಮನೆ ಚಳ್ಳಕೆರೆ?: ಚಳ್ಳಕೆರೆ ನ್ಯೂಸ್ :
ತಡರಾತ್ರಿ ಬಿದ್ದ ಮಳೆಗೆ ಚಳ್ಳಕೆರೆ ತಾಲೂಕಿನ ವಿವಿಧೆಡೆ ರಸ್ತೆಗಳು ಕೊಚ್ಚಿಹೊಗಿದ್ದು ಕೆಲವು ವಾಹನಗಳು ಅಪಘಾತಕ್ಕೆ ಈಡಾಗಿವೆ.
ಅದರಂತೆ ನಗರದ ರೈಲ್ವೆ ಟ್ರ್ಯಾಕ್ ಮುಂಭಾಗ ರಸ್ತೆ ಸಂಪೂರ್ಣ ಹಾಳಗಿದ್ದು ವಾಹನ ಸಾವರಾರರು ಅಂಗೈಯಲ್ಲಿ ಜೀವ ಹಿಡಿದು ಸಾಗಬೇಕಿದೆ.
ಸುಮಾರು ಒಂದೂವರಡಿ ಹಾಳಾದ ಗುಂಡಿಗಳು ಬಿದ್ದು ನೀರು ನಿಂತಿರುವುದು ಕಂಡು ಬಂದಿದೆ.
ಇಂತಹ ಅಪಾಯಕಾರಿ ತಗ್ಗು ಗುಂಡಿಗಳನ್ನು ನೋಡಿದ ಸಮಾಜ ಸೇವಕ, ಪ್ರಗತಿ ಪರ ರೈತ ಡಾ. ಆರ್ ಎ.ದಯಾನಂದ ಮೂರ್ತಿ ಹೊಲಕ್ಕೆ ಹೋಗಿ ಬರುವ ಸಮಯದಲ್ಲಿ ಗುಂಡಿಗಳನ್ನು ನೋಡಿದಾಗ ಸುಮಾರು ವಾಹನಗಳು, ಬೈಕುಗಳು ಆ ಗುಂಡಿ ಒಳಗೆ ಬಿದ್ದು ತೊಂದರೆ ಅನುಭವಿಸಿದ್ದನ್ನು ಕಣ್ಣಾಂರೆ ಕಂಡಿದ್ದೆನೆ
ದೊಡ್ಡ ದೊಡ್ಡ ವಾಹನಗಳು ಬಂದಾಗ ಆ ಗುಂಡಿ ಒಳಗೆ ಚಕ್ರ ಇಳಿದಾಗ ಅಕ್ಕಪಕ್ಕದ ವಾಹನಗಳಿಗೆ ಮತ್ತೆ ಮನುಷ್ಯರಿಗೆ ಆ ಕೆಸರು ನೀರು ಸಿಡಿಯುವುದು ಕಂಡಿದ್ದೆನೆ ಇದರಿಂದ ಸರಕಾರ ಮಾಡದ ಕಾರ್ಯವನ್ನು ತಾವೇ ತುರ್ತಾಗಿ ತಾತ್ಕಾಲಿಕವಾಗಿ ತಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾನೆ ಎಂದು ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾಹಿತಿ ಅಂಚಿಕೊಂಡಿದ್ದಾರೆ.
ಇನ್ನೂ ಈ ತಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ವಾಹನ ಸಾವರಾರು ಆದ
ಶಿವು, ನಾಗರಾಜ್ ಹಾಗೂ ರಶೀಕ್ ಈ ಮೂವರು ದಯಾನಂದಮೂರ್ತಿ ಜೊತೆ ಗುಂಡಿಯನ್ನು ಮುಚ್ಚಲಿಕ್ಕೆ ಸಹಕಾರ ಮಾಡಿದ್ದಾರೆ.
ಈ ಮನೋಭಾವ ಪ್ರತಿಯೊಬ್ಬರಲ್ಲಿ ಮೂಡಬೇಕು, ಈ ಒಂದು ಸಮಾಜ ಸೇವೆ ಮಾಡಲು ಪ್ರತಿಯೊಬ್ಬರು ಮುಂದೆ ಬರಬೇಕು ಎಂದು ಕರೆ ನೀಡಿದ್ದಾರೆ.
ಇನ್ನೂ ಸಂಬಂಧಿಸಿದ ಅಧಿಕಾರಿ ವರ್ಗ ಹೆಚ್ಚಿನ ಅನಾವುತಗಳು ಸಂಭವಿಸುವ ಮೊದಲೇ ಈ ತಗ್ಗು ಗುಂಡಿಗಳನ್ನು ಮುಚ್ಚಿ ವಾಹನ ಸಾವರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡುವರೇ ಕಾದು ನೋಡಬೇಕಿದೆ.
[5:02 PM, 5/20/2024] ರಾಮುದೊಡ್ಮನೆ ಚಳ್ಳಕೆರೆ?: