ಮುಂಗಾಲು ಮಳೆ ಪ್ರವೇಶದ ಮುನ್ಸೂಚನೆ ಹಿನ್ನೆಲೆ ರಾಜ ಕಾಲುವೆಗಳ ಸ್ವಚ್ಛತೆಗೆ ಮುಂದಾದ ನಗರಸಭೆ ಅಧಿಕಾರಿಗಳು 31 ವಾರ್ಡ್ ಗಳ ಚರಂಡಿಗಳ ಸ್ಥಿತಿ ಗಂಭೀರ ಸಾರ್ವಜನಿಕರ ಅಕ್ರೋಶ

ಚಳ್ಳಕೆರೆ:ತಾಲೂಕಿನ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಕಳೆದ ವರ್ಷದಲ್ಲಿ ಬರಗಾಲದಿಂದ ತತ್ತರಿಸಿ ಮಳೆ ಬೆಳೆ ಇಲ್ಲದೆ ನಿರಾಸೆ ಅನುಭವಿಸಿದ್ದರು ಈಗಾಗಲೇ ಮೇ ಮಧ್ಯ ಭಾಗದಲ್ಲಿ ಮುಂಗಾರು ಮಳೆ ಆರಂಭವಾಗುವ ಮುನ್ಸೂಚನೆ ದೊರೆತಿರುವ ಕಾರಣ ತಾಲೂಕಿನ ಜನತೆಯಲ್ಲಿ ಹರ್ಷ ಮನೆ ಮಾಡಿದ್ದು

ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಮುಂಗಾರು ಮಳೆ ಮುನ್ಸೂಚನೆ ದೊರೆತಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಬೀಜ ಹಾಗೂ ರಸಗೊಬ್ಬರ ಕೊಂಡುಕೊಳ್ಳಲು ನಗರದತ್ತ ಧಾವಿಸುತ್ತಿರುವುದು ಸಾಮಾನ್ಯವಾಗಿದೆ.

ರಾಜ ಕಾಲುವೆ ಸ್ವಚ್ಛತೆಗೆ ಮುಂದಾದ ನಗರಸಭೆ: ನಗರದಲ್ಲಿ ನಗರಸಭೆ ವತಿಯಿಂದ ಮುಂಗಾರು ಮಳೆ ನಿರೀಕ್ಷೆಯ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿರುವ ರಾಜ ಕಾಲುವೆಗಳನ್ನು ಮುಂಜಾಗ್ರತಾ ಕ್ರಮವಾಗಿ ದುರಸ್ತಿಗೊಳಿಸಲು ಮುಂದಾಗಿದೆ.

ಆದರೆ ನಗರದ 31 ವಾರ್ಡ್ ಗಳಲ್ಲಿಯೂ ಸಹ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ನಗರಸಭೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಅಗ್ರಹವಾಗಿದೆ. 

ವಾರ್ಡ್ ಗಳಲ್ಲಿ ನಿಯಮಿತವಾಗಿ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಮಳೆ ಬಂದಾಗ ಚರಂಡಿಗಳು ಉಕ್ಕಿ ಹರಿಯುತ್ತವೆ ಚರಂಡಿಯಲ್ಲಿರುವ ಕಸ ಕಡ್ಡಿಗಳೆಲ್ಲವೂ ರಸ್ತೆಗೆ ಬಂದು ಬೀಳುತ್ತವೆ ಎಂದು ನಗರದ ಪ್ರಜ್ಞಾವಂತರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ದೊಡ್ಡ ಮಳೆ ಆದರೆ ನಗರದ ರಹೀಮ್ ನಗರ ಸೂಜಿ ಮಲ್ಲೇಶ್ವರ ನಗರ ಶಾಂತಿನಗರ ವಾಲ್ಮೀಕಿ ನಗರ ಹೊಸ ಬ್ಯಾಡರಟ್ಟಿ ಕುವೆಂಪು ಶಾಲೆ ಅಕ್ಕಪಕ್ಕ ಸೇರಿದಂತೆ ಹಲವು ನಗರಗಳ ಓಣಿಗಳು ಸಂಪೂರ್ಣ ಜಲಾವೃತಗೊಳ್ಳುತ್ತವೆ ಮನೆಗಳಿಗೆ ಮಂಡಿ ಉದ್ಧ ನೀರು ನುಗ್ಗು ತ್ತವೆ ಇದರಿಂದಾಗಿ ಜನರು ಸಾಕಷ್ಟು ತೊಂದರೆ ಅನುಭವಿಸುವುದಲ್ಲದೆ ಆಸ್ತಿಪಾಸ್ತಿ ಹಾನಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. 

ನಗರದ ಜನತೆಗೆ ಉತ್ತಮ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡಬೇಕಿದ್ದ ನಗರಸಭೆ ಈ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ ಕೇವಲ ರಾಜಕಾಲುವ ಸ್ವಚ್ಛತೆ ಮಾತ್ರ ನಡೆಯುತ್ತಿದೆ ಚರಂಡಿಗಳ ಸ್ಥಿತಿ ಸುಧಾರಿಸಲು ಸಂಬಂಧಪಟ್ಟವರು ಯಾರು ಗಮನ ಹರಿಸಿಲ್ಲ ಎಂಬ ಸಿಟ್ಟನ್ನು ವಾರ್ಡ್ಗಳಲ್ಲಿ ಸಾರ್ವಜನಿಕರು ನಗರಸಭೆ ಸದಸ್ಯರ ಹಾಗೂ ಅಧಿಕಾರಿಗಳ ವಿರುದ್ಧ ದೂರುತಿದ್ದಾರೆ.

ನಗರದಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲಾಗುತ್ತಿದ್ದು ನಗರದ ಕಾಟಪನಹಟ್ಟಿ ಗೊಲ್ಲರಹಟ್ಟಿ ರೈಲ್ವೆ ನಿಲ್ದಾಣ ಪಾವಗಡ ರಸ್ತೆಗಳಲ್ಲಿನ ರಾಜಕಾಲುವೆಗಳನ್ನು ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಗುತ್ತಿದೆ.

ಇನ್ನಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರದ 31 ವಾರ್ಡ್ಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ, ಮಳೆಗಾಲದಲ್ಲಾಗುವ ಅನಾಹುತಗಳನ್ನು ತಪ್ಪಿಸುತ್ತಾರೆಯೋ ಅಥವಾ ಮಳೆ ಬಂದಾಗ ಕೊಡೆ ಹಿಡಿದರಾಯಿತು ಎಂದು ಕಾದು ಕುಳಿತುಕೊಳ್ಳುವರೋ ಕಾದುನೋಡಬೇಕಿದೆ.

ನಗರಸಭೆ ಅಧಿಕಾರಿಗಳು ರಾಜ ಕಾಲುವೆಗಳ ಸ್ವಚ್ಛತೆಗೆ ಒತ್ತು ನೀಡಿದಂತೆ ನಗರದ ವಿವಿಧ ವಾರ್ಡ್ಗಳಲ್ಲಿನ ಚರಂಡಿಗಳ ಸ್ವಚ್ಛತೆಗೂ ಗಮನಹರಸುವುದು ಉತ್ತಮ ಕೂಡಲೇ ಅಧಿಕಾರಿಗಳು ಪೌರಕಾರ್ಮಿಕರ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಿದೆ 

ನೇತಾಜಿ ಆರ್ ಪ್ರಸನ್ನ 

ನಗರಸಭೆ ನಾಮನಿರ್ದೇಶನ ಸದಸ್ಯ 

ನಗರದ ವಿವಿಧ ವಾರ್ಡ್ಗಳಲ್ಲಿ ಚರಂಡಿ ಸ್ವಚ್ಛತೆ ಮರೀಚಿಕೆಯಾಗಿದ್ದು ಅಧಿಕಾರಿಗಳನ್ನು ಪ್ರಶ್ನಿಸಿದರೆ ನೀತಿ ಸಂಹಿತೆ ನೆಪ ಹಾಗೂ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ ಎಂಬ ಉಢಾಫೆ ಉತ್ತರವನ್ನು ನೀಡುತ್ತಿದ್ದಾರೆ ಮಳೆಗಾಲ ಆರಂಭಕ್ಕೂ ಮುನ್ನ ಚರಂಡಿಗಳನ್ನು ಸ್ವಚ್ಛಗೊಳಿಸಿದರೆ ಮಾತ್ರ ಸ್ಲಂ ನಿವಾಸಿಗಳು ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯ 

ಬೋಜರಾಜ 

ಕೆ ಆರ್ ಎಸ್ ಪಕ್ಷದ ಮುಖಂಡ 

Namma Challakere Local News
error: Content is protected !!