ಚಳ್ಳಕೆರೆ : ಬರಗಾಲದ ಪ್ರಯುಕ್ತ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಅವಶ್ಯಕವಾಗಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಗ್ರಾಮಗಳು ಇವೆ ಅವುಗಳನ್ನು ಪಟ್ಟಿ ಮಾಡಿ ಅತೀ ತುರ್ತಾಗಿ ಕುಡಿಯುವ ನೀರು ಕೊಡಬೇಕು ಎಂದು ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಬರಗಾಲಕ್ಕೆ ಸಂಬAಧಿಸಿದ ಪರೀಶೀಲನೆ ಸಭೆಯಲ್ಲಿ ಮಾತನಾಡಿದರು, ಚಳ್ಳಕೆರೆ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಯಾವ ಗ್ರಾಮದಲ್ಲಿ ಸಮಸ್ಯೆ ಇದೆಯೋ ಅಂತಹ ಗ್ರಾಮಗಳನ್ನು ಪಟ್ಟಿಮಾಡಿಕೊಂಡು ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಬೀಕರ ಬರಗಾಲ ಆವರಿಸಿರುವುದರಿಂದ ಜನರಿಗೆ ಅವಶ್ಯಕವಾಗಿ ಕುಡಿಯುವ ನೀರನ್ನು ಹೊದಗಿಸಬೇಕು, ಇನ್ನೂ ದುಡಿಯುವ ಕೈಗಳಿಗೆ ನರೇಗಾ ಯೋಜನೆಯಲ್ಲಿ ಉದ್ಯೋಗ ನೀಡಬೇಕು ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ವರದಾನವಗಿದೆ ಎಂದರು.
ಗೋಶಾಲೆಗಳಲ್ಲಿ ಗೋವುಗಳಿಗೆ ಕುಡಿಯುವ ನೀರು ನೆರಳಿನ ವ್ಯವಸ್ಥೆ ಇರುವಂತೆ ಮಾಡಿರಬೇಕು, ಕೇವಲ ನೆಪ ಮಾತ್ರಕ್ಕೆ ಅಧಿಕಾರಿಗಳು ಕಾರ್ಯ ಮಾಡದೆ ನೊಂದವರ ಬಾಳಿಗೆ ಬೆಳಕಾಗಬೇಕು, ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸಬೇಕು, ದೇವರ ಗೋವುಗಳಿಗೆ ಗೋಶಾಲೆಯಲ್ಲಿ ಮೇವು ನೀಡುವ ವ್ಯವಸ್ಥೆ ಹಾಗಬೇಕು ಇನ್ನೂ ಪಶು ಇಲಾಖೆಯಿಂದ ಮೇವು ಆಹಾರ ಕಿಟ್ ನೇರವಾಗಿ ರೈತರಿಗೆ ನೀಡಬೇಕು ಇದರ ವರದಿ ಸಲ್ಲಿಸಬೇಕು ಎಂದು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣರವರಿಗೆ ಸೂಚಿಸಿದರು.
ಗೋಶಾಲೆಯಲ್ಲಿ ಬೋರ್‌ವೆಲ್ ವಿಫಲವಾದರೆ ಖಾಸಗಿ ಬೋರ್ ವೆಲ್ ಪಡೆಯಿರಿ, ಅನಿವಾರ್ಯವಾದಗ ಮಾತ್ರ ಟ್ಯಾಂಕರ್ ಬಳಸಿಕೊಳ್ಳಿ ಎಂದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ತಾಲೂಕಿನಲ್ಲಿ ನಾಲ್ಕು ಗೋಬಳಿಗಳಲ್ಲಿ ಸುವ್ಯವಸ್ಥಿತವಾಗಿ ಗೋಶಾಲೆಗೆ ನೀರು ನೆರಳಿನ ವ್ಯವಸ್ಥೆ ಮಾಡಲಾಗಿದೆ, ಹಿರೆಕೆರೆ ಕಾವಲ್‌ನ ಗೋಶಾಲೆ ಅತೀ ದೊಡ್ಡ ಗೋವುಗಳು ಇರುವ ಗೋಶಾಲೆ ಅಲ್ಲಿ ವಿಶಾಲವಾದ ಮರಗಳ ನೆರಳು ಇದೆ, ಸದ್ಯಕ್ಕೆ ಯಾವುದೇ ಕೊರೆತೆ ಇಲ್ಲ ಎಂದರು.
ದೊಡ್ಡೆರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನರಾಯನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಇರುವ ಎರಡು ಕೊಳವೇ ಬಾವಿ ವಿಫಲವಾಗಿವೆ, ಎರಡು ಕಿಲೋ,. ದೂರದ ಕೊಳವೆ ಬಾವಿಗೆ ಪೈಪ್ ಲೈನ್‌ಗೆ ಅವಶ್ಯಕವಾಗಿದೆ ಅನುದಾನ ಬೇಕು ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ ಎಂದು ದೊಡ್ಡೆರಿ ಪಿಡಿಓ ಪಾಲಯ್ಯ ಸಭೆಯ ಗಮನಕ್ಕೆ ತಂದರು.
ಕುಡಿಯುವ ನೀರು ಸರಬಾರು ಇಲಾಖೆ ದಯಾನಂದ ಮಾತನಾಡಿ, ತಾಲೂಕಿನಲ್ಲಿ ಯಾದಲಗಟ್ಟೆ, ಬಂಡೆ ತಿಮ್ಮಲ್ಲಾಪುರ, ತಳಕು, ನನ್ನಿವಾಳ, ಕಾರೆಕಾಟ್ಲಹಟ್ಟಿ, ಬಂಗಾರದೇವರಹಟ್ಟಿ, ಇನ್ನೂ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಅದನ್ನು ಅತೀ ಶೀಘ್ರವಾಗಿ ಕಾರ್ಯಗತಗೊಳಿಸಲಾಗುವುದು ಎಂದಾಗ ನೋಡೆಲ್ ಅಧಿಕಾರಿ ರಾಮಾಂಜನೇಯ ಮಾತನಾಡಿ, ಇನ್ನು ಒಂದು ತಿಂಗಳು ನೀವು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದರೆ ಮುಂಗಾರು ಮಳೆ ಬರುವುದು ನೀರಿನ ಬವಣಿ ತಪ್ಪಬಹುದು ಎಂದರು.
ಇದೇ ಸಂಧರ್ಭದಲ್ಲಿ ತಾಲೂಕು ನೋಡೆಲ್ ಅಧಿಕಾರಿ ರಾಮಾಂಜನೇಯ, ತಹಶಿಲ್ದಾರ್ ರೇಹಾನ್ ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ತಾಪಂ.ಇಒ, ಲಕ್ಷ್ಮಣ್, ಕೃಷಿ ತಾಂತ್ರಿಕ ಅಧಿಕಾರಿಗಳು, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣ, ಕುಡಿಯುವ ನೀರು ಸರಬರಾಜು ಅಧಿಕಾರಿ ದಯಾನಂದ, ಕಂದಾಯ ಅಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿಗಳು, ಹಾಗೂ ಪಿಡಿಓಗಳು ಇತರರು ಹಾಜರಿದ್ದರು.

About The Author

Namma Challakere Local News

You missed

error: Content is protected !!