ಚಳ್ಳಕೆರೆ ನ್ಯೂಸ್ :
ವರುಣನ ಆರ್ಭಟಕ್ಕೆ ಧರೆಗುರುಳಿದ ವಿದ್ಯುತ್
ಕಂಬಗಳು
ಹೊಳಲ್ಕೆರೆಯ ಚಿಕ್ಕಜಾಜೂರಿನಲ್ಲಿ ಗಾಳಿ ಮತ್ತು ಮಳೆಯಿಂದ,
ಅರಸನಘಟ್ಟ ಹಾಗೂ ಚಿಕ್ಕಂದವಾಡಿ ಗ್ರಾಮಗಳಲ್ಲಿ, 25 ಕ್ಕೂ
ಹೆಚ್ಚು, ವಿದ್ಯುತ್ ಕಂಬಗಳು, 2 ಪರಿವರ್ತಕಗಳು ಉರುಳಿ
ಬಿದ್ದಿವೆ.
ಚಿಕ್ಕಂದವಾಡಿಯಿಂದ ಅರಸನಘಟ್ಟಕ್ಕೆ ಹೋಗುವ
ಮಾರ್ಗದಲ್ಲಿನ ಅಡಿಕೆ ಮತ್ತು ಕಾಡು ಮರಗಳು ತೆಂಗಿನ ಮರಗಳು,
ವಿದ್ಯುತ್ ತಂತಿಗಳ ಮೇಲೆ ಬಿದ್ದಿವೆ.
ಸಮೀಪದ ಕೋಡಗವಳ್ಳಿ
ಗ್ರಾಮಗಳಲ್ಲಿ ಹದ ಮಳೆಯಾಗಿದ್ದು, ಮರಗಳು ವಿದ್ಯುತ್ ಕಂಬಗಳ
ಮೇಲೆ ಉರುಳಿ ಬಿದ್ದಿದ್ದವು,, ಬೆಸ್ಕಾಂ ಸಿಬ್ಬಂದಿ ಅವುಗಳನ್ನು
ತೆರವುಗೊಳಿಸಿದ್ದಾರೆ.