ಚಳ್ಳಕೆರೆ : ಪ್ರಕೃತಿ ವಿಕೋಪದಿಂದ ತಾಲೂಕಿನಲ್ಲಿ ಅಪಾರ ಹಾನಿಯಾಗಿದೆ ಸಮಗ್ರ ವರದಿ ಮೂಲಕ ಸರಕಾರದ ಮಟ್ಟದಲ್ಲಿ ನೊಂದ ರೈತರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಧಿಕಾರ ವರ್ಗ ಶ್ರಮಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಕೃತಿ ವೈಪರೀತ್ಯದಿಂದ ಹಾನಿಯಾದ ಕೃಷಿ ಬೆಳೆ, ತೋಟಗಾರಿಕೆ ಬೆಳೆ, ಹಾಗೂ ವಸತಿ ಗೃಹಗಳು, ತಾಲೂಕಿನ ಶಾಲಾ ಕಟ್ಟಡ ಸೇರಿದಂತೆ ಕೃಷಿ ಚಟುವಟಿಕೆಗಳ ಮುನ್ನೆಚ್ಚರಿಕೆ ಕ್ರಮವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು

ಚಳ್ಳಕೆರೆ ಕ್ಷೇತ್ರಕ್ಕೆ ಸಂಬಂಧಿಸಿದ ಪಗಡಲ ಬಂಡೆ ಗ್ರಾಮದಲ್ಲಿ 2 ಮನೆಗಳು, ಸಿದ್ದೇಶನ‌ದುರ್ಗ 5 ಮನೆ ಹಾನಿ, ದೊಡ್ಡ ಚೆಲ್ಲೂರು ಗ್ರಾಮದಲ್ಲಿ 4 , ಚೆನ್ನಮ್ಮನಾಗತಿಹಳ್ಳಿ 5 ಮನೆಗಳು, ಮಹದೇವಪುರ 1 ಮನೆ, ಶುದ್ದ ನೀರಿನ ಘಟಕಗಳು, ರಂಗಮಂದಿರ, ಈಗೇ ಕೃಷಿ ಇಲಾಖೆಯ 6 ಹೆಕ್ಟೇರ್ ಬೆಳೆ, ತೋಟಗಾರಿಕೆ ಬೆಳೆ 36 ಹೆಕ್ಟೇರ್ ಬೆಳೆಗಳಿಗೆ ಹಾನಿಯಾಗಿದೆ ಎಂದು ಸಹಯಾಕ ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ ಸಭೆಯ ಗಮನ ಸೆಳೆದರು.

ಇನ್ನೂ ಬೆಸ್ಕಾಂ ಇಲಾಖೆಯ ಎಡ್ಲೂ ರಾಜಣ್ಣ ಮಾತನಾಡಿ,ಕಳೆದ ಒಂದು ವಾರದಿಂದ ಸುಮಾರು 45 ವಿದ್ಯುತ್ ಕಂಬಗಳು, 5 ಟ್ರಾನ್ಸಪರ್ಮರ್ ಸುಟ್ಟು ಹೊಗಿವೆ, ದೇವರೆಡ್ಡಿಹಳ್ಳಿ ಗ್ರಾಮದ ಕುರಿಗಾಯಿ ಯುವಕ ಸಿಡಿಲಿಗೆ ಬಲಿಯಾಗಿದ್ದಾನೆ, ಈಗೇ ತಾಲೂಕಿನಲ್ಲಿ ಅಪಾರ ಹಾನಿಯಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ ಎನ್ನಲಾಗಿದೆ

ಮೊಳಕಾಲ್ಮೂರು ಕ್ಷೇತ್ರದ20 ಗ್ರಾಮ ಪಂಚಾಯತ್ ವರದಿ ನೀಡಿ ಸಾರ್ವಜನಿಕರ ಹಿತ ಕಾಪಾಡಬೇಕು, ಮಳೆ ಗಾಳಿ ಸಿಡಿಲಿಗೆ ತುತ್ತಾಗುವವರಿಗೆ ಮುನ್ನೆಚ್ಚರಿಕೆ ಕ್ರಮ ನೀಡಿ ಸಣ್ಣ ಪುಟ್ಟ ಗಾಯಾಳುಗಳಿಗೆ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಿ ಎಂದಿದ್ದಾರೆ

ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ, ಮಳೆ ಗಾಳಿ, ಸಂಭವಿಸುವ ಮೊದಲೆ ಮನೆ ಸೇರಿಕೊಳಿ, ಒಂದು ವೇಳೆ ದೂರದ ಪ್ರದೇಶಗಳಲ್ಲಿ ಇದ್ದರೆ ನೀವಿದಲ್ಲೆ ಬಯಲು ಪ್ರದೇಶದಲ್ಲಿ ಸೂಕ್ತವಾದ ರೀತಿಯಲ್ಲಿ ಕುಳಿತು ಕೊಳ್ಖಿ, ಮರ, ಗಿಡ, ವಿದ್ಯುತ್ ಕಂಬ, ಮೊಬೈಲ್ ಟವರ್, ಹಳೆಯ ಗೊಡೆ, ಈಗೇ ಯಾವುದೇ ಅವಲಂಬಿತ ಪ್ರದೇಶದಲ್ಲಿ ಇರದೆ ಬಯಲು ಪ್ರದೇಶದಲ್ಲಿ ಇರಬೇಕು ಮೊಡ ಕವಿದ ತಕ್ಷಣವೇ ಮನೆಗೆ ಬರಬೇಕು ಎಂದು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಾಹನಗಳ ಮೂಲಕ ಮೈಕ್ ಅನ್ವನ್ಸ್ ಮೂಲಕ ಪ್ರಕಟಣೆ ನೀಡಬೇಕು ಎಂದಿದ್ದಾರೆ

About The Author

Namma Challakere Local News
error: Content is protected !!