ಚಳ್ಳಕೆರೆ : ತಾಲೂಕಿನಲ್ಲಿ ನಿನ್ನೆ ಸುರಿದ ಭಾರಿ ಮಳೆ ಗಾಳಿಯಿಂದ ರೈತರ ಕೃಷಿ, ಹಾಗೂ ತೋಟಗಾರಿಕೆ ಬೆಳೆಗಳು ಅಪಾರ ಹಾನಿಯಾಗಿವೆ.

ರೈತರು ಬೆಳೆದ ಪಪ್ಪಾಯಿ, ಬಾಳೆ, ಹಾಗೂ ತೆಂಗು ಅಡಿಕೆ ಮುಂತಾದ ಬೆಳೆಗಳು ಬಹುತೇಕ ನೆಲಕಚ್ಚಿವೆ.

ಕಂದಾಯ ಹಾಗೂ ತೋಟಗಾರಿಕೆ , ಕೃಷಿ ಅಧಿಕಾರಿಗಳ ಜಂಟಿಯಾಗಿ ಸಮೀಕ್ಷೆ ಮಾಡುವ ಕಾರ್ಯವನ್ನು ಕೈಗೊಂಡಿದ್ದು ಅದರಂತೆ ನೇರಲಗುಂಟೆ, ಮನಮೈನಹಟ್ಟಿ, ಇನ್ನು ಇತರ ಗ್ರಾಮದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ತಹಶೀಲ್ದಾರ್ ಎನ್‌ ರಘುಮೂರ್ತಿ , ನಿನ್ನೆ ಸುರಿದ ಭಾರಿ ಮಳೆಗೆ ತಾಲೂಕಿನ ಬಹುತೇಕ ಕಡೆಗಳಲ್ಲಿ ರೈತರ ಬೆಳೆಗಳು ನಷ್ಟ ವಾಗಿವೆ, ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗಿದೆ,

ಶುದ್ಧ ಕುಡಿಯುವ ನೀರಿನ ಘಟಕಗಳು, ರಂಗಮಂದಿರಗಳು , ವಿದ್ಯುತ್ ಕಂಬಗಳು, ಹಾಗೂ ಶಾಲೆ ಕೊಠಡಿಯ ಮೇಲ್ಛಾವಣಿಗಳು ಹಾರಿ ಹೋಗಿದ್ದು ಈ ಎಲ್ಲಾ ಸ್ಥಳಕ್ಕೆ ಇಂದು ಭೇಟಿ ನೀಡಲಾಗಿದ್ದು ಇದರ ಸಂಪೂರ್ಣ ವರದಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಲಾಗುವುದು ಎಂದಿದ್ದಾರೆ.

ನಂತರ ಸಾರ್ವಜನಿಕರಿಗೆ ಸಂದೇಶ ನೀಡಿ, ಸಾರ್ವಜನಿಕರು ಮಳೆ , ಗಾಳಿ ಮುಗಿಯುವವರೆಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಮರಗಳು, ಹಳೆ ಗೋಡೆಗಳ ಹಾಗೂ ವಿದ್ಯುತ್ ಪರಿವರ್ತಕಗಳ ಹತ್ತಿರ ನಿಲ್ಲುವುದು ಮುಂತಾದ ಕಾರ್ಯಗಳನ್ನು ಮಾಡಕೂಡದು,

ಹಾಗೂ ಈ ಸಂಬಂಧ ಪ್ರತಿ ಪಂಚಾಯಿತಿಯಲ್ಲಿ ತಿಳುವಳಿಕೆಯನ್ನು ಸಾರ್ವಜನಿಕರಿಗೆ ಮೂಡಿಸಲಾಗುವುದು ಹಾಗೂ ಕುರಿಗಾಯಿಗಳು ಕುರಿ , ಮೇಕೆ ದನ ಕಾಯಲು ಅರಣ್ಯಕ್ಕೆ ಹೋದಾಗ ಮಳೆ ಬಂದಾಗ ಮರದಡಿ ನಿಲ್ಲಬೇಡಿ ಮನೆಯಿಂದ ಹೋಗುವಾಗಲೇ ಕೊಡೆ, ಹಾಗು ರಕ್ಷಣಾ ಕವಚ ಜೊತೆಯಲ್ಲಿ ಇಟ್ಟುಕೊಳ್ಳಬೇಕು,

ಮಳೆಬಂದಾಗ ಬಯಲ ಪ್ರದೇಶದಲ್ಲಿ ನಿಂತುಕೊಳ್ಳಿ ಇದರಿಂದ ಆಗುವಂತಹ ಅನವುತ ತಪ್ಪುತ್ತದೆ. ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ವಿರುಪಾಕ್ಷಪ್ಪ ಉಪ ತಹಶೀಲ್ದಾರ ಚೇತನ್ ಕುಮಾರ್, ಹಾಗೂ ಕೃಷಿ ಅಧಿಕಾರಿಗಳು ರೈತರು ಇದ್ದರು

About The Author

Namma Challakere Local News
error: Content is protected !!