ಚಳ್ಳಕೆರೆ : ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಸರಕಾರಿ ಪ್ರೌಢಶಾಲೆಯ ಸರಜ್ಜನಹಳ್ಳಿ ಗ್ರಾಮದ, ಗ್ರಾಮ ಪಂಚಾಯಿತಿ ಸದಸ್ಯ ಜಿ.ಬಿ.ಬೋರಯ್ಯನವರ ಪುತ್ರಿ ವಿದ್ಯಾರ್ಥಿನಿ ಜಿ.ಬಿ. ಅಮೂಲ್ಯ ಎಸ್‌ಎಸ್‌ಎಲ್‌ಸಿಯಲ್ಲಿ 625 ಕ್ಕೆ 502ಅಂಕಗಳನ್ನು ಪಡೆದು ಶಾಲೆಗೆ ಟಾಪರ್ ಆಗಿ ತೇರ್ಗಡೆ ಹೊಂದಿದ್ದರೆ
ಇದರಿAದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನವೀನ ರವರು ವಿದ್ಯಾರ್ಥಿಗೆ ಸ್ವೀಟ್ ನೀಡಿ ಸನ್ಮಾನ ಮಾಡಿ ನಂತರ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಿಗೆ ಈ ಸಾಧನೆ ಮಾದರಿಯಾಗಲಿದೆ, ಈ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಹಾಗೂ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಇನ್ನೂ ಇದೆ ಸಂದರ್ಭದಲ್ಲಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನಾ ನಾಯಕನಹಟ್ಟಿ ಹೋಬಳಿಯ ಯುವ ಘಟಕದ ಅಧ್ಯಕ್ಷರಾದ ಪ್ರಸನ್ನ ಕುಮಾರ್ , ಓಬಯ್ಯನಹಟ್ಟಿ ದರ್ಶನ ಸಿ , ಶಾಲೆಯ ದ್ವಿತೀಯ ದರ್ಜೆ ಸಹಾಯಕರಾದ ಹರೀಶ್ ಮತ್ತು ಬೋರಯ್ಯ ಹಾಗೂ ಇತರರು ಉಪಸ್ಥಿತರಿದ್ದರು ..

About The Author

Namma Challakere Local News
error: Content is protected !!