ಚಳ್ಳಕೆರೆ ನ್ಯೂಸ್ :
ರಾತ್ರೋರಾತ್ರಿ ಟಾಟಾ ಎಸಿ ವಾಹನಕ್ಕೆ ಕಿಡಿಗೇಡಿಗಳಿಂದ ಬೆಂಕಿ
ಮನೆಯ ಮುಂದೆ ನಿಲ್ಲಿಸಿದ್ಧ ಮಿನಿ ಟೆಂಪೂಗೆ ಬೆಂಕಿ
ಇಟ್ಟ ಘಟನೆ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಳ್ಳಕೆರೆ ನಗರದ ಕುವೆಂಪು ರಸ್ತೆಯ ಕೈಲಾಸ್ ಗ್ಯಾಸ್ ಸಮೀಪದ 4
ನೇ ಕ್ರಾಸ್ ನ ಮನೆಯ ಮುಂದೆ ನಿಲ್ಲಿಸಿದ್ದ ಕೆ. ಎ. 52 ಎ 3827
ನಂಬರ್ ನ ಮಿನಿ ಟೆಂಪೂ ವಾಹನಕ್ಕೆ ಯಾರೋ ಕಿಡುಗೇಡಿಗಳು ರಾತ್ರಿ ವೇಳೆ
ಬೆಂಕಿ ಹಚ್ಚಿದ್ದಾರೆ.
ಇನ್ನೂ ಈ ಟೆಂಪೋ ವಾಹನ ಟಿ. ಎಂ ರಮೇಶ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ.
ಬೆಂಕಿಯ ಅನಾವುತಕ್ಕೆ ವಾಹನದ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ.
ತಕ್ಷಣವೇ ಸ್ಥಳಿಯ ನಿವಾಸಿಗಳು ನೀರು ಹಾಕಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಶುಕ್ರವಾರ ಬೆಳಗಿನಜಾವ ನಾಲ್ಕು ಗಂಟೆಯ ಸಮಯದಲ್ಲಿ ಈ ಘಟನೆ
ನಡೆದಿದೆ ಎನ್ನಲಾಗಿದೆ.
ಈ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ
ಜರುಗಿದೆ ಎನ್ನಲಾಗಿದೆ.