ಚಳ್ಳಕೆರೆ ನ್ಯೂಸ್ :
ಗೋಶಾಲೆ ತೆರೆಯುವಂತೆ ಅಗ್ರಹಿಸಿ ಪ್ರಗತಿಪರ
ಸಂಘಟನೆಗಳಿಂದ ಪ್ರತಿಭಟನೆ
ಪಟ್ಟಣದ ವ್ಯಾಪ್ತಿಯಲ್ಲಿ ಗೋಶಾಲೆ ತೆರಿಯುವಂತೆ ಅಗ್ರಹಿಸಿ
ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು
ಪ್ರತಿಭಟನೆ ನಡೆಸಿದರು.
ಭೀಕರ ಬರಗಾಲದಿಂದ ತಾಲೂಕಿನಲ್ಲಿ
ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದು, ಮೇವು ನೀರು ಸಿಗದೇ
ದನ ಕರುಗಳನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ.
ಕೂಡಲೇ
ಸರ್ಕಾರ ಇಲ್ಲಿನ ಸಮಸ್ಯೆಯನ್ನು ಆಲಿಸಿ ತಕ್ಷಣವೇ ಗೋಶಾಲೆಯನ್ನು
ತೆರೆದು ಜಾನುವಾರುಗಳನ್ನು ಉಳಿಸಬೇಕು ಎಂದು ಪ್ರತಿಭಟನೆ
ನಡೆಸಿದರು.
ಈ ವೇಳೆ ರೈತ ಮುಖಂಡರು ರೈತರು ಇದ್ದರು.