ಚಳ್ಳಕೆರೆ ನ್ಯೂಸ್ :
ಕಾಟಪ್ಪನ ಹಟ್ಟಿಯ ವಿಜ್ಞಾನ ಶಿಕ್ಷಕ ಲೋ ಬಿಪಿಯಿಂದ ನಿಧನ
ಚಳ್ಳಕೆರೆ ತಾಲ್ಲೂಕಿನ ತಿಮ್ಮಣ್ಣನಹಳ್ಳಿ
ಸಿಪಿ ಮೂಡಲಗಿರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಹಲವು ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಶಿವಕುಮಾರ್ ಲೋ ಬಿಪಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇವರಿಗೆ (55) ವಯಸ್ಸಾಗಿದ್ದು ರಾತ್ರಿ ಅನಾರೋಗ್ಯ ಕಾರಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇನ್ನೂ ಮೂವರು ಮಕ್ಕಳು ಹಾಗೂ ಪತ್ನಿ ಮಹಾಲಕ್ಷ್ಮಿ ಅಪಾರ ಬಂದು ಬಳಗವನ್ನ ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ಇಂದು ಪಾವಗಡ ರಸ್ತೆಯ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಸಹೋದರ ಕ್ಲಾಸಿಕ್ ಚಂದ್ರಶೇಖರ್ ತಿಳಿಸಿದ್ದಾರೆ.
ಶಿವಕುಮಾರ ನಿಧಾನ ವಾರ್ತೆಯಿಂದ ತಾಲೂಕಿನ ಶಿಕ್ಷಕರು ಕಂಬನಿ ಮಿಡಿದಿದ್ದಾರೆ.